ರೈತರ ವೇಷದಲ್ಲಿ ಬಿಜೆಪಿ ಸದಸ್ಯರಿಂದ ದೆಹಲಿಯಲ್ಲಿ ವಿಧ್ವಂಸಕಾರಿ ಕೃತ್ಯ : ರಾಕೇಶ್ ಟಿಕಾಯತ್

Prasthutha|

ನವದೆಹಲಿ : ಜ.26ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರಂತೆ ವೇಷತೊಟ್ಟ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಧ್ವಂಸಕಾರಿ ಕೃತ್ಯ ಎಸಗಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಶುಕ್ರವಾರ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಜ.26ರಂದು ಇಬ್ಬರು ಶಾಸಕರೊಂದಿಗೆ ಬಂದ ಸುಮಾರು 400 ಜನರು ರೈತರ ವರ್ಚಸ್ಸನ್ನು ಹಾಳು ಮಾಡಿದ್ದಾರೆ. ಸಿಖ್ ಜನರನ್ನು ಗುರಿಯಾಗಿಟ್ಟು ಅವರನ್ನು ದೇಶ ವಿರೋಧಿಗಳಂತೆ ತೋರಿಸಲು ಪ್ರಯತ್ನಿಸಿದ್ದಾರೆ.

- Advertisement -

ಗಡಿಯಲ್ಲಿ ವಿದ್ಯುತ್ ಹಾಗೂ ನೀರಿನ ಪೂರೈಕೆಯನ್ನು ಕಡಿತಗೊಳಿಸಿದ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಅವರು ಟೀಕಿಸಿದರು. ಗಾಝಿಪುರ ಗಡಿಯನ್ನು ರೈತರು ತೊರೆಯುವುದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದೊಂದಿಗೆ ಮಾತನಾಡುತ್ತೇವೆ. ಶಾಂತಿಯುತವಾಗಿ ಇರುವಂತೆ ಒತ್ತಾಯಿಸುತ್ತೇನೆ. ಸರಕಾರದ ಜೊತೆಗಿನ ಮಾತುಕತೆ ಮುಂದುವರೆಯುತ್ತಿದೆ ಎಂದು ಟಿಕಾಯತ್ ಹೇಳಿದ್ದಾರೆ.

ಪ್ರತಿಭಟನಾನಿರತ ರೈತರಿಗೆ ನೀರು ಹಾಗೂ ಶೌಚಾಲಯ ಸಮಸ್ಯೆಯಾಗದಂತೆ ದೆಹಲಿ ಸರಕಾರದಿಂದ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.  

Join Whatsapp