ಬ್ಯಾರಿಕೇಡ್ ಗಳನ್ನು ತೆಗೆಯಿರಿ, ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಿ : ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗ

Prasthutha|

ನವದೆಹಲಿ : ದೆಹಲಿ ಗಡಿ ಭಾಗಗಳಲ್ಲಿ ರೈತ ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್, ಮುಳ್ಳು ತಂತಿಗಳು, ಕಾಂಕ್ರೀಟ್ ಗೋಡೆಗಳು, ಮುಳ್ಳು ಸರಳುಗಳನ್ನು ತೆಗೆದು ಹಾಕುವಂತೆ ಜಾಗತಿಕ ಮಾನವ ಹಕ್ಕುಗಳ ಸಂಘಟನೆಯಾದ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗ ಒತ್ತಾಯಿಸಿದೆ.

- Advertisement -

ಟ್ರಾಕ್ಟರ್ ರ್ಯಾಲಿ ನಂತರ ನಡೆಯುತ್ತಿರುವ ರೈತರ ಅನಿಯಂತ್ರಿತ ಬಂಧನವನ್ನು ನಿಲ್ಲಿಸುವಂತೆಯೂ ಆಯೋಗ ಆಗ್ರಹಿಸಿದೆ.

ರೈತರ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸುವ ಬದಲು, ಸರಕಾರ ಅವರ ಮೇಲೆ ದೌರ್ಜನ್ಯ ಎಸಗುತ್ತಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆಯೋಗ ದೂರಿದೆ.

- Advertisement -

ಬ್ಯಾರಿಕೇಡ್ ಗಳನ್ನು ತೆಗೆಯಬೇಕು ಮತ್ತು ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಯೋಗವು ಆಗ್ರಹಿಸಿದೆ.

Join Whatsapp