ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟಿಸಿದ ರೈತರು

Prasthutha|

ಹಾಲಿನ ಪ್ಯಾಟ್ 3.5 ಇರಬೇಕು. ಅದಕ್ಕಿಂತ ಕಡಿಮೆ ಪ್ಯಾಟ್ ಬಂದಿದೆ ಎಂದು ನೆಪ ಹೇಳಿ ಹಾಲು ಖರೀದಿಸಲು ನಿರಾಕರಿಸಿದ್ದರಿಂದ 300 ಲೀಟರ್ ಗೂ ಅಧಿಕ ಹಾಲನ್ನು ರೈತರು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.

- Advertisement -

 ತಾಲೂಕಿನ ಲಕ್ಕವ್ವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ಹಾಲು ಉತ್ಪಾದಕ ರೈತರಿಂದ ಖರೀದಿಸುವ ಹಾಲಿನ ಪ್ಯಾಟ್ 3.5 ಇರಬೇಕು ಅದಕ್ಕಿಂತ ಕಡಿಮೆ ಪ್ಯಾಟ್ ಕಡಿಮೆ ಬಂದಿದೆ ಎಂದು ಹೇಳಿ ಹಾಲು ಖರೀದಿಸಲು ನಿರಾಕರಿಸಿದ್ದವು. ಇದರಿಂದ ಆಕ್ರೋಶಗೊಂಡ ರೈತರು ಭಾನುವಾರ ಮತ್ತು ಸೋಮವಾರ ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು. ಫಸಲುಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದು ಅವರನ್ನು ಹೈನುಗಾರಿಕೆ ಸಂರಕ್ಷಣೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಹಾಲು ಖರೀದಿಸಲು ಸಂಘ ಹಿಂದೇಟು ಹಾಕುತ್ತಿದೆ. ಈ ಹಿಂದೆ 31, 32 ಪ್ಯಾಟ್ ಬಂದರೂ ಹಾಲಿನ್ನು ಖರೀದಿ ಮಾಡಲಾಗುತ್ತಿತ್ತು, ಈಗ ಹಾಲು ಉತ್ಪಾದನೆ ಹೆಚ್ಚಾಗಿರುತ್ತದೆ. ಲಾಕ್ ಡೌನ್ ನಲ್ಲಿ ಖರೀದಿಸಿದ ಹಾಲು ಮಾರಾಟ ಆಗುತ್ತಿಲ್ಲ. ಈ ಕಾರಣ ಹೇಳಿದ ಹಾಲು ಒಕ್ಕೂಟ ಪ್ಯಾಟ್ ನೆಪ ಹೇಳುತ್ತಿದೆ ಎಂದು ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕಷ್ಟದಲ್ಲಿರುವ ರೈತರ ಹೊಟ್ಟೆ ಮೇಲೆ ಬರೆ ಎಳೆಯಲಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸದಿರುವುದು ದುರಂತ. ಕೂಡಲೇ ಹಾಲು ಖರೀದಿಸಲು ಒಕ್ಕೂಟ ಮುಂದಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

- Advertisement -

ಹಾಲು ಉತ್ಪಾದಕ ರೈತರಾದ ಉಗ್ರೇಗೌಡ, ಕುಮಾರ್, ಚಿದಾನಂದ, ಭಾಗ್ಯಮ್ಮ, ನೇತ್ರಾವತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Join Whatsapp