ಅಂಬಾನಿ ಮನೆ ಸಮೀಪ ವಾಹನದಲ್ಲಿ ಸ್ಪೋಟಕ ಪತ್ತೆ ಪ್ರಕರಣ | ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಝ್ ಕೆಲಸದಿಂದ ಅಮಾನತು
Prasthutha: March 15, 2021

ಅಂಬಾನಿ ಮನೆ ಮುಂಭಾಗದ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಮುಂಬೈ ಪೊಲೀಸ್ ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಝ್ ಅವರನ್ನು ಬಂಧಿಸಿದ್ದು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ದ ಹೊರಗಿನ ವಾಹನದಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡ ತನಿಖೆಯಲ್ಲಿ ಎನ್‌ಕೌಂಟರ್ ತಜ್ಞ ಸಚಿನ್ ವಾಝ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ಮರು ದಿವಸವೇ ಅಮಾನತುಗೊಳಿಸಲಾಗಿದೆ.
ಫೆಬ್ರವರಿ 25 ರಂದು ಅಂಬಾನಿಯ ಮುಂಬೈ ನಿವಾಸದ ಹೊರಗೆ ಸ್ಫೋಟಕ ಜೆಲಾಟಿನ್ ತುಂಡುಗಳು ಮತ್ತು ಬೆದರಿಕೆ ಪತ್ರವನ್ನು ಹೊಂದಿರುವ ಸ್ಕಾರ್ಪಿಯೋ ಕಾರು ಪತ್ತೆಯಾಗಿದ್ದು ಈ ಬಗ್ಗೆ ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಎಸ್ ಚೈತನ್ಯ, ಎಪಿಎಲ್ ಸಚಿನ್ ವಾಝ್ ಅವರನ್ನು ಆಡ್ಲ್ ಸಿಪಿ ವಿಶೇಷ ಶಾಖೆಯ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
