ಚೆಲಾರಿಯಲ್ಲಿ ಎನ್ಐಎ ದಾಳಿ| ಸಂಘಟನೆಗೂ ದಾಳಿಗೂ ಯಾವುದೇ ಸಂಬಂಧ ಇಲ್ಲ : ಪಾಪ್ಯುಲರ್ ಫ್ರಂಟ್

Prasthutha: March 15, 2021

ಮಲಪ್ಪುರಂ: ಚೆಲಾರಿಯಲ್ಲಿ ನಡೆದ ಎನ್‌ಐಎ ದಾಳಿಗೆ ಪಾಪ್ಯುಲರ್ ಫ್ರಂಟ್‌ನೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ, ಸಂಘಟನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡುವುದರಿಂದ ಮಾಧ್ಯಮಗಳು ಹಿಂದೆ ಸರಿಯುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಲಪ್ಪುರಂ ಪೂರ್ವ ಜಿಲ್ಲಾಧ್ಯಕ್ಷ ಪಿ ಅಬ್ದುಲ್ ಅಝೀಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಚೆಲಾರಿ ಏರಿಯಾ ಕಾರ್ಯದರ್ಶಿ ಹನೀಫಾ ಹಾಜಿ ಅವರ ಅಳಿಯನ ಪ್ರಕರಣದ ತನಿಖೆಯ ಭಾಗವಾಗಿ ಹನೀಫಾ ಹಾಜಿ ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

“ಹನೀಫಾ ಹಾಜಿಯ ಅಳಿಯ ರಾಹುಲ್ ಅಬ್ದುಲ್ಲಾ ಅವರಿಗೆ ಸಂಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ ಪಾಪ್ಯುಲರ್ ಫ್ರಂಟ್ ಅನ್ನು ಈ ಪ್ರಕರಣಕ್ಕೆ ಎಳೆದು ತರುವುದು ಕೆಟ್ಟ ಉದ್ದೇಶವಾಗಿದೆ. ರಾಜಕೀಯ ವಿರೋಧಿಗಳನ್ನು ಬಲೆಗೆ ಬೀಳಿಸುವ ಏಜೆನ್ಸಿಯಾಗಿ ಎನ್ಐಎ ಮಾರ್ಪಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ದಾಳಿಯ ಕಾರಣವನ್ನು ಬಹಿರಂಗಪಡಿಸದೆ ಎನ್ಐಎ ಮೌನವಹಿಸುತ್ತಿರುವಾಗ ಕೆಲವು ಮಾಧ್ಯಮಗಳು ಸಂಘಟನೆಯನ್ನು ಭಯೋತ್ಪಾದಕರೆಂದು ಬಿಂಬಿಸುವುದರ ಹಿಂದೆ ಪೊಲೀಸರು ಮತ್ತು ಮಾಧ್ಯಮಗಳ ವಿಶೇಷ ಆಸಕ್ತಿ ಈಗ ಬಹಿರಂಗಗೊಂಡಿದೆ. ಜನರು ಸತ್ಯವನ್ನು ಅರ್ಥಮಾಡಿಕೊಳ್ಳಲು ಸಿದ್ಧರಾಗಿರಬೇಕು ಮತ್ತು ಕೆಲವು ಮಾಧ್ಯಮಗಳ ಸುಳ್ಳು ಪ್ರಚಾರವನ್ನು ನಂಬಬಾರದು” ಎಂದು ಅವರು ಆಗ್ರಹಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!