ಎರಡು ಬಾರಿ ವಾಗ್ದಂಡನೆಗೆ ಒಳಗಾದ ಮೊದಲ ಅಮೆರಿಕ ಅಧ್ಯಕ್ಷ ಟ್ರಂಪ್!

Prasthutha|

ವಾಷಿಂಗ್ಟನ್ : ಅಮೆರಿಕ ಸಂಸತ್ ಭವನದ ಮೇಲೆ ದಾಳಿ ನಡೆಸಲು ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಾಗ್ದಂಡನೆ ವಿಧಿಸುವ ನಿರ್ಣಯದ ಪರ ಅಮೆರಿಕ ಸಂಸತ್ತು ಮತ ಚಲಾಯಿಸಿದೆ. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಎರಡು ಬಾರಿ ವಾಗ್ದಂಡನೆಗೆ ಒಳಗಾದ ಮೊಟ್ಟಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಡೊನಾಲ್ಡ್ ಟ್ರಂಪ್ ಪಾತ್ರರಾದರು.

- Advertisement -

“ಅಮೆರಿಕದ ಅಧ್ಯಕ್ಷ ಸೇರಿದಂತೆ ಯಾರೂ ಕಾನೂನಿಗಿಂತ ಮೇಲಲ್ಲ ಎನ್ನುವುದನ್ನು ಇಂದು ಈ ಸದನದ ಎರಡೂ ಪಕ್ಷಗಳ ಒಪ್ಪಿಗೆಯಂತೆ ಎತ್ತಿ ಹಿಡಿದಿದೆ” ಎಂದು ಡೆಮಾಕ್ರಟಿಕ್ ಪಕ್ಷದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ಆದರೆ, ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅಧಿಕಾರ ವಹಿಸಿಕೊಳ್ಳುವ ಮುನ್ನ ಟ್ರಂಪ್ ರನ್ನು ವಾಗ್ದಂಡನೆಗೆ ಗುರಿಪಡಿಸಲು ಸಾಧ್ಯವಿಲ್ಲ. ಜ.20ರಂದು ಜೋ ಬೈಡನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ಟ್ರಂಪ್ ಹುದ್ದೆ ತ್ಯಜಿಸುವ ಲಕ್ಷಣವಿಲ್ಲ. ಹೀಗಾಗಿ, ಅವರ ಅಧಿಕಾರಾವಧಿ ಜ.19ರಂದು ಮುಗಿದು, ಜ.20ರಂದು ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ.

- Advertisement -

ಆ ಬಳಿಕ ಸೆನೆಟ್ ವಿಚಾರಣೆಯನ್ನು ಟ್ರಂಪ್ ಎದುರಿಸಲೇ ಬೇಕಾಗುತ್ತದೆ. ಇಲ್ಲಿ ಶಿಕ್ಷೆಗೆ ಗುರಿಯಾದಲ್ಲಿ ಅವರು 2024ರಲ್ಲಿ ಮತ್ತೊಮ್ಮೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಿಷೇಧ ವಿಧಿಸಲಾಗುತ್ತದೆ.

Join Whatsapp