January 14, 2021

ಮಂಗಳೂರು-ಉಡುಪಿ ಬಸ್ ಸಿಬ್ಬಂದಿ ನಡುವೆ ಮಾರಾಮಾರಿ | ರಾಡ್ ಹಿಡಿದು ದಾಂಧಲೆ; ವೀಡಿಯೊ ವೈರಲ್

ಕಾಪು : ಎರಡು ಖಾಸಗಿ ಬಸ್ ಸಿಬ್ಬಂದಿ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ನಡೆದಿದ್ದು, ರಾಡ್ ಹಿಡಿದುಕೊಂಡು ದಾಂಧಲೆ ನಡೆಸುವ ವೀಡಿಯೊಗಳು ವೈರಲ್ ಆಗಿವೆ.

ಉಡುಪಿ-ಮಂಗಳೂರು ನಡುವೆ ಹೆದ್ದಾರಿಯಲ್ಲಿ ಪೈಪೋಟಿಯ ವೇಗದಲ್ಲಿ ಚಲಿಸಿದ ಬಸ್ ಗಳ ವೀಡಿಯೊ ಕೂಡ ವೈರಲ್ ಆಗಿದೆ. ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್ ಕೊಹಿನೂರ್ ಎಕ್ಸ್ ಪ್ರೆಸ್ ಮತ್ತು ಎಕೆಎಂಎಸ್ ಬಸ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ಎಕೆಎಂಎಸ್ ಬಸ್ ಕೊಹಿನೂರ್ ಎಕ್ಸ್ ಪ್ರೆಸ್ ಬಸ್ಸನ್ನು ಹಿಂದಿಕ್ಕಿ ಕಾಪು ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಕರೆದೊಯ್ಯಲು ಆಕ್ಷೇಪಿಸಿದೆ.

ಎಕೆಎಂಎಸ್ ಬಸ್ ಸಿಬ್ಬಂದಿ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್, ಕೊಹಿನೂರ್ ಬಸ್ ಚಾಲಕನ ಬಳಿ ಹೋಗಿ ರಾಡ್ ನಿಂದ ಬಸ್ ಗೆ ಹೊಡೆದಿದ್ದಾರೆ. ಕೊಹಿನೂರ್ ಬಸ್ ನಿರ್ವಾಹಕನಿಗೆ ಹೊಡೆಯಲು ಬಂದ ವೇಳೆ ಕೈಯಲ್ಲಿ ರಾಡ್ ಹಿಡಿದಿದ್ದ ವ್ಯಕ್ತಿಯನ್ನು ಜಲೀನ್ ಎಂದು ಗುರುತಿಸಲಾಗಿದೆ.

ಎರಡು ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕೊಹಿನೂರ್ ಬಸ್ ಚಾಲಕ ಸಫಿಯುಲ್ಲಾ ದೂರು ದಾಖಲಿಸಿದ್ದಾರೆ. ಎರಡೂ ಬಸ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯೊಂದು ತಿಳಿಸಿದೆ.  

ಟಾಪ್ ಸುದ್ದಿಗಳು

ವಿಶೇಷ ವರದಿ