ದಿಶಾ ಅತ್ಯಾಚಾರ ಪ್ರಕರಣ: 38 ನಟ, ನಟಿಯರ ವಿರುದ್ಧ ದೂರು

Prasthutha|

ನವದೆಹಲಿ: 2019ರಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ಪಶುವೈದ್ಯೆ ‘ದಿಶಾ’ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ್ದಕ್ಕಾಗಿ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಒಟ್ಟು 38 ನಟ, ನಟಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಾಗಿದೆ.

- Advertisement -

ದೆಹಲಿ ಮೂಲದ ಗೌರವ್ ಗುಲಾಟಿ ಎಂಬ ವಕೀಲರು ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ‘ದಿಶಾ ಅತ್ಯಾಚಾರ ಪ್ರಕರಣದಲ್ಲಿ, ಜವಾಬ್ದಾರಿಯುತ ನಾಗರಿಕರಾಗಿರಬೇಕಾದವರು ಸಂತ್ರಸ್ತೆಯ ನಿಜವಾದ ಹೆಸರು ಹಾಗೂ ಊರು ಬಹಿರಂಗಪಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ತೀಸ್ ಹಜಾರಿ ನ್ಯಾಯಾಲಯದಲ್ಲಿ ಅರ್ಜಿ ಕೂಡ ದಾಖಲಿಸಿದ್ದಾರೆ.


ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ರವಿ ತೇಜ, ರಾಕುಲ್ ಪ್ರೀತ್ ಸಿಂಗ್, ಅಲ್ಲು ಸೀರಿಶ್, ಚಾರ್ಮಿ ಕೌರ್,ಅನುಪಮ್ ಖೇರ್, ಪರ್ಹಾನ್ ಅಕ್ತರ್, ಅಜಯ್ ದೇವಗನ್, ಸೇರಿದಂತೆ 38 ನಟ ನಟಿಯರು ತಮ್ಮ ಸಾಮಾಜಿಕ ಜಾಲತಾಣಗಳಾದಲ್ಲಿ ಸಂತ್ರಸ್ತೆಯ ನಿಜವಾದ ಹೆಸರು ಬಹಿರಂಗಪಡಿಸಿ ಕಾನೂನು ಉಲ್ಲಂಘಿಸಿದ್ದಾರೆ’ ಎಂದು ವಕೀಲರು ಆರೋಪಿಸಿದ್ದಾರೆ.

- Advertisement -


ನವೆಂಬರ್ 28, 2019 ರಂದು ಹೈದರಾಬಾದ್ ನ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಶುವೈದ್ಯೆಯೊಬ್ಬರನ್ನು ನಾಲ್ವರು ಕಾಮುಕರು ಅಪಹರಿಸಿ, ಅತ್ಯಾಚಾರ ಮಾಡಿ, ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ್ದರು.

Join Whatsapp