ಬೆಳ್ತಂಗಡಿಯಲ್ಲಿ ಅನಾರೋಗ್ಯಪೀಡಿತ ಮಹಿಳೆಯನ್ನು ಬೆಂಚಿಗೆ ಕಟ್ಟಿ ಆಸ್ಪತ್ರೆಗೆ ಹೊತ್ತೊಯ್ದ ಪತಿ, ಮಗ: ವೀಡಿಯೋ ವೈರಲ್

Prasthutha|

ಮಂಗಳೂರು: ಅನಾರೋಗ್ಯಪೀಡಿತ ಮಹಿಳೆಯೊಬ್ಬರನ್ನು ಮರದ ಬೆಂಚಿಗೆ ಕಟ್ಟಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿಯೇ ಆಕೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೆರೆ ಹಿತ್ತಿಲುನಲ್ಲಿ ಆಗಸ್ಟ್ 17 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


ಕೆರೆಹಿತ್ತಿಲು ನಿವಾಸಿ ಕಮಲಾ ಸಾವನ್ನಪ್ಪಿದ ಮಹಿಳೆ. ಇವರ ಮನೆಗೆ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಕಾಲುದಾರಿಯಲ್ಲೇ ಹೋಗಬೇಕಾಗಿದೆ.

- Advertisement -


ಕಮಲಾ ಅವರಿಗೆ ಕಳೆದ ತಿಂಗಳು ತೀವ್ರವಾಗಿ ಆರೋಗ್ಯ ಹದಗೆಟ್ಟಿತ್ತು. ಈ ವೇಳೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವ್ಯವಸ್ಥೆ ಇಲ್ಲದ್ದರಿಂದ ಪತಿ ಮತ್ತು ಮಗ ಬೆಂಚಿಗೆ ಅವರನ್ನು ಬೆಂಚಿಗೆ ಕಟ್ಟಿ ಎತ್ತಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಪ್ರದೇಶದಲ್ಲಿ ಐದಕ್ಕೂ ಹೆಚ್ಚು ಕುಟುಂಬಗಳಿದ್ದು, ಯಾರಾದರೂ ಅನಾರೋಗ್ಯಪೀಡತರಾದರೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಡಬೇಕಾಗಿದೆ. ರಸ್ತೆಗಾಗಿ ಹಲವು ಬಾರಿ ಪಂಚಾಯತ್ ಗೆ ಮನವಿ ಮಾಡಿದರೂ ಇವರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.  

- Advertisement -