ಗುಜರಾತಿಗಳ ಬಗ್ಗೆ ಅವಮಾನಕರ ಹೇಳಿಕೆ; ತೇಜಸ್ವಿ ಯಾದವ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Prasthutha|

ಅಹ್ಮದಾಬಾದ್: ಗುಜರಾತಿಗಳ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

- Advertisement -


ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಗುಜರಾತಿಗಳು ಮಾತ್ರ ಡಕಾಯಿತರಾಗಲು ಸಾಧ್ಯ ಎಂಬ ತೇಜಸ್ವಿ ಅವರ ಹೇಳಿಕೆಯ ವಿರುದ್ಧ ಎನ್ ಜಿ ಒ ಕಾರ್ಯಕರ್ತ ಹರೇಶ್ ಮೆಹ್ತಾ ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.


ಮಾರ್ಚ್ 21 ರಂದು ತೇಜಸ್ವಿ ಯಾದವ್ ಪಾಟ್ನಾದಲ್ಲಿ ಈ ಹೇಳಿಕೆ ನೀಡಿದ್ದು, ತೇಜಸ್ವಿ ಯಾದವ್ ಎಲ್ಲಾ ಗುಜರಾತಿಗಳನ್ನು ಅವಮಾನಿಸಿದ್ದಾರೆ. ಆದ್ದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಎಂದು ಒತ್ತಾಯಿಸಲಾಗಿದೆ.

- Advertisement -


ತೇಜಸ್ವಿ ಅವರ ಭಾಷಣ ವೀಡಿಯೋವನ್ನೊಳಗೊಂಡ ಪೆನ್ ಡ್ರೈವ್ ಮತ್ತು ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯವು ಮೇ 1 ರಂದು ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಮೆಹ್ತಾ ಅವರ ವಕೀಲ ತಿಳಿಸಿದ್ದಾರೆ.

Join Whatsapp