PFI ವಿರುದ್ಧ ತಿರುಚಿದ ವೀಡಿಯೋ ಪ್ರಸಾರ ಮಾಡಿ ಷಡ್ಯಂತ್ರ । ನಕಲಿ TRP ವೀರ ಅರ್ನಬ್ ಗೆ ದೆಹಲಿ ಕೋರ್ಟ್ ಸಮನ್ಸ್ ಜಾರಿ!

Prasthutha: March 18, 2021

ಪ್ರಕರಣ ಗಂಭೀರವೆಂದು ಹೇಳಿದ ಸಾಕೇತ್ ಜಿಲ್ಲಾ ಕೋರ್ಟ್

ದೆಹಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಸಂದರ್ಶನದ ತಿರುಚಿದ ವೀಡಿಯೋವನ್ನು ಪ್ರಸಾರ ಮಾಡಿ ಸಂಘಟನೆಗೆ ಕೆಟ್ಟ ಹೆಸರು ತರುವ ರಿಪಬ್ಲಿಕ್ ಚಾನೆಲಿನ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ಷಡ್ಯಂತ್ರದ ವಿರುದ್ಧದ ಪ್ರಕರಣದಲ್ಲಿ ದೆಹಲಿ ಕೋರ್ಟ್, TRP ಹಗರಣದ ವೀರ ಅರ್ನಬ್ ಗೆ ಸಮನ್ಸ್ ಜಾರಿಗೊಳಿಸಿದೆ. ಈ ಬಗ್ಗೆ PFI ಸಂಘಟನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಡಾ. ಎಂ ಶಮೂನ್ ಸಲ್ಲಿಸಿದ್ದ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿರುವ ಗಗನ್ ದೀಪ್ ಜಿಂದಾಲ್, ಮೇ 27 ರಂದು ನಾಯಾಯಲಯದ ಮುಂದೆ ಹಾಜರಾಗುವಂತೆ ಅರ್ನಬ್ ಗೆ ಸೂಚಿಸಿದೆ.

ಘಟನೆಯ ಹಿನ್ನೆಲೆಯೇನು ?

ಸಂಶೋಧನಾ ವಿದ್ಯಾರ್ಥಿಯೆಂದು ಹೇಳಿಕೊಂಡಂತಹಾ ಓರ್ವ ವ್ಯಕ್ತಿ PFI ಸಂಘಟನೆಯ ಸಾರ್ವಜನಿಕ ಸಂಪರ್ಕ ನಿರ್ದೇಶಕರಾಗಿದ್ದ ಡಾ. ಶಮೀಮ್ ಅವರನ್ನು ಸಂಪರ್ಕಿಸಿ ಶಹೀನ್ ಭಾಗ್ ಸಿಎಎ ವಿರೋಧಿ ಹೋರಾಟದಲ್ಲಿ ಸರಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ಅಗ್ಯತ್ಯಗಳ ಕುರಿತು ವಿವರಿಸಿದ್ದ. ಆದರೆ ಶಮೀಮ್ ಅವರು ಮಧ್ಯಪ್ರವೇಶಿಸಿ  ಅದನ್ನು ವಿರೋಧಿಸಿದರಲ್ಲದೇ, ಪ್ರಜಾಸತ್ತಾತ್ಮಕ ಹಾದಿಯಲ್ಲಿ ತಮ್ಮ ಸಂಘಟನೆ ನಡೆಸಿಕೊಂಡ ಬಂದಂತಹಾ ಹೋರಾಟಗಳನ್ನು ವಿವರಿಸಿದ್ದರು. ಆದರೆ ರಿಪಬ್ಲಿಕ್ ಚಾನೆಲ್ ಶಮೀಮ್ ಅವರ ಮಾತುಗಳನ್ನು ಎಡಿಟ್ ಮಾಡಿ, ಅವರು ಸರಕಾರದ ವಿರುದ್ಧ ಹಿಂಸಾತ್ಮಕ ಹೋರಾಟಗಳ ಬಗ್ಗೆ ಒಲವು ಹೊಂದಿದ್ದಾರೆಂದು ಬಿಂಬಿಸುವ ತಿರುಚಿದ ವೀಡಿಯೋಗಳನ್ನು ಮಾಡಿ ಅದಕ್ಕೆ ‘PFI ವಿರುದ್ಧದ ಸ್ಟಿಂಗ್ ಅಪರೇಶನ್’ ಎಂದು ಹೆಸರು ನೀಡಿ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಡಾ. ಶಮೂನ್, ರಿಪಬ್ಲಿಕ್ ಚಾನೆಲಿನ ಇಂತಹಾ ಕೃತ್ಯಗಳು ನನಗೆ ವೈಯುಕ್ತಿಕವಾಗಿ ಮಾತ್ರವಲ್ಲ, ಇಡೀ ದೇಶಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದ್ದರು.

 ಓರ್ವ ವೈದ್ಯನಾಗಿ ನಾನು ಪ್ರತಿದಿನ ಅಸಂಖ್ಯಾತ ರೋಗಿಗಳನ್ನು ಯಾವುದೇ ಧರ್ಮ, ಜಾತಿ ಬೇಧವಿಲ್ಲದೆ ಸಂದರ್ಶಿಸುತ್ತೇನೆ. ನನ್ನ ವಿರುದ್ಧ ಮಾಡಲಾಗಿರುವ ಈ ವೀಡಿಯೋ ಜಗತ್ತಿನಾದ್ಯಂತ ಪ್ರಸಾರ ಮಾಡಲಾಗಿದ್ದು, ಇದರಿಂದಾಗಿ ನನ್ನ ವೃತ್ತಿಗೆ ಮತ್ತು ವೈಯುಕ್ತಿಕ ಬದುಕಿಗೆ ತೊಂದರೆಯುಂಟಾಗಿದೆ. ಅದಲ್ಲದೆ ಈ ಚಾನೆಲ್ ಯೂಟ್ಯೂಬ್ ಮತ್ತು ಟ್ವಿಟ್ಟರಿನಲ್ಲಿ ಕೂಡಾ ನನ್ನ ವಿರುದ್ಧದ ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದು, ಅಲ್ಲಿಂದ ಇದನ್ನು ತೆಗೆದು ಹಾಕುವಂತೆ ಚಾನೆಲಿಗೆ ನಿರ್ದೇಶನ ನೀಡಬೇಕೆಂದು ಕೂಡಾ ನ್ಯಾಯಲಯವನ್ನು ಕೋರಿದ್ದಾರೆ. ಚಾನೆಲಿನ ವಿರುದ್ಧ ಡಾ ಶಮೂನ್ ಅವರು ಒಂದು ರೂಪಾಯಿಗಳ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ. ಅವರ ಪರವಾಗಿ ವಕೀಲರಾದ ಅಬ್ದುಲ್ ಸಮದ್ ಮತ್ತು ಶಕೀಲ್ ಅಬ್ಬಾಸ್ ಅವರು ಕೋರ್ಟಿನಲ್ಲಿ ವಾದ ಮಂಡಿಸಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!