ಜಾರಕಿಹೊಳಿ ಸೆಕ್ಸ್ ಹಗರಣ | ಸಿಡಿಯಲ್ಲಿದ್ದ ಯುವತಿ ಮನೆಯಲ್ಲಿ 23 ಲಕ್ಷ ರೂ. ಪತ್ತೆ!

Prasthutha|

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಸಿಡಿಯಲ್ಲಿದ್ದ ಯುವತಿಯ ಮನೆಯ ಮೇಲೆ ಎಸ್‌ಐಟಿ ತಂಡ ದಾಳಿ ನಡೆಸಿದೆ.

- Advertisement -

ಎಸಿಪಿ ಧರ್ಮೇಂದ್ರ ನೇತೃತ್ವದ ಎಸ್​ಐಟಿ ತಂಡ ದಾಳಿ ನಡೆಸಿ ಮನೆ ಪರಿಶೀಲನೆ ನಡೆಸಿದೆ. ದಾಳಿ ವೇಳೆ ಯುವತಿಯ ಮನೆಯಲ್ಲಿ 23 ಲಕ್ಷ ರೂ. ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.  ಹಣವನ್ನು ವಶಕ್ಕೆ ಪಡೆದ ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಯುವತಿ ಈ ಮನೆಗೆ ಮತ್ತೆ ಬಂದಿದ್ದಳಾ? ಆಕೆ ಈ ಮನೆಯಲ್ಲಿದ್ದ ಸಂದರ್ಭದಲ್ಲಿ ಬೇರೆ ಯಾರಾದರೂ ಭೇಟಿ ನೀಡುತ್ತಿದ್ದರಾ? ಎಂದು ಕಟ್ಟಡದ ಮಾಲೀಕರಿಗೆ ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ಯುವತಿ 3-4 ದಿನಗಳ ಹಿಂದೆ ಫೋನ್ ಮೂಲಕ ಕ್ಷಮೆ ಕೇಳಿದ್ದಳು ಎಂದು ಕಟ್ಟಡದ ಮಾಲೀಕರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಯುವತಿಯ ಮನೆ ಪರಿಶೀಲನೆಗಾಗಿ ಎಸ್ ಐಟಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿತ್ತು.

- Advertisement -

ಯುವತಿಯ ಮನೆಯ ಮೇಳೆ ದಾಳಿ ನಡೆಸಿದ ಎಸ್ಐಟಿ ಕೆಲವು ಮಹತ್ವದ ದಾಖಲೆಗಳನ್ನು ಪತ್ತೆ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಎಲ್ಲ ಸಾಕ್ಷ್ಯಧಾರಗಳನ್ನು ಸಂಗ್ರಹಿಸುತ್ತಿದೆ ಎನ್ನಲಾಗಿದೆ.

Join Whatsapp