ಕುಟುಂಬಸ್ಥರ ಭೇಟಿಗೆ ಉಮರ್ ಖಾಲಿದ್ ಮನವಿ | ತಿರಸ್ಕರಿಸಿದ ದೆಹಲಿ ಹೈಕೋರ್ಟ್

Prasthutha: September 21, 2020

ನವದೆಹಲಿ: ಕುಟುಂಬವನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕೆಂಬ ಉಮರ್ ಖಾಲಿದ್ ರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ದೆಹಲಿ ಗಲಭೆಗೆ ಸಂಬಂಧಿಸಿ ಸೆಪ್ಟೆಂಬರ್ 13ಕ್ಕೆ ಉಮರ್ ಖಾಲಿದ್ ರನ್ನು ಪೊಲೀಸರು ಬಂಧಿಸಿದ್ದರು.  ನಂತರ ಅವರನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಎರಡು ದಿವಸಗಳಲ್ಲಿ ಅರ್ಧ ಗಂಟೆ ತನ್ನ ಕುಟುಂಬದ ಸದಸ್ಯರನ್ನು ನೋಡಲು ಅನುಮತಿ ಕೋರಿ ಉಮರ್ ಖಾಲಿದ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ತನ್ನ ಕುಟುಂಬ ಸದಸ್ಯರನ್ನು ನೋಡಲು ಅವಕಾಶ ನೀಡುವುದಾಗಿ ಪೊಲೀಸರು ಮೌಖಿಕ ಭರವಸೆ ನೀಡಿದ್ದರೂ ನಂತರ ಅನುಮತಿ ರದ್ದುಪಡಿಸಲಾಯಿತು ಎಂದು ಉಮರ್ ಪರ ಹಾಜರಾದ ವಕೀಲ ತ್ರಿದೀಪ್ ಪಯಸ್ ಹೇಳಿದ್ದಾರೆ.

ಕುಟುಂಬದ ಸದಸ್ಯರನ್ನು ಭೇಟಿಯಾಗುವುದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶೇಷ ಸರಕಾರಿ ಅಭಿಯೋಜಕ ನ್ಯಾಯಾಲಯಕ್ಕೆ ತಿಳಿಸಿದರು. ತನ್ನ ವಕೀಲರೊಂದಿಗೆ ನಿರಂತರ ಭೇಟಿಯಾಗುತ್ತಿರುವ ಉಮರ್, ಕುಟುಂಬದವರಿಗಾಗಿ ಏನಾದರೂ ಸಂದೇಶವಿದ್ದರೆ ತನ್ನ ವಕೀಲರ ಮೂಲಕ ಅದನ್ನು ತಿಳಿಸಬಹುದಾಗಿದೆ ಎಂದು ಅವರು ಕೋರ್ಟಿಗೆ ತಿಳಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!