ಹಿಂದೂ ಉಗ್ರವಾದಿಗಳಿಂದ ಹಲ್ಲೆಗೊಳಗಾದ ಸಂತ್ರಸ್ತನಿಗೆ ಪರಿಹಾರ ನೀಡಿ | ಅಸ್ಸಾಂ ಸರಕಾರಕ್ಕೆ NHRC ಆದೇಶ

Prasthutha News

ಅಸ್ಸಾಂ: ಹಿಂದೂ ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾದ ಶೌಕತ್ ಅಲಿ(68) ಅವರಿಗೆ 1 ಲಕ್ಷ ರೂಪಾಯಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ವು ಅಸ್ಸಾಂ ಸರಕಾರಕ್ಕೆ ಆದೇಶಿಸಿದೆ.

2019ರ ಎಪ್ರಿಲ್ ನಲ್ಲಿ, ಹಿಂದೂ ಉದ್ರಿಕ್ತ ಗುಂಪೊಂದು ಅಸ್ಸಾಂನ ಬಿಸ್ವನಾಥ್ ಚರಿಯಾಲಿ ಪಟ್ಟಣದಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ಎಂಬ ಅನುಮಾನದಲ್ಲಿ ಶೌಕತ್ ಅಲಿಯ ಮೇಲೆ ಹಲ್ಲೆ ನಡೆಸಿ, ಹಂದಿ ಮಾಂಸ ತಿನ್ನುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತನ ಕುಟುಂಬ ಆರೋಪಿಸಿತ್ತು.

ಕಾಂಗ್ರೆಸ್ಸಿನ ಅಸ್ಸಾಂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಡೆಬಾಬ್ರತ ಸೈಕಿಯಾ ಅವರು ನೀಡಿದ ದೂರುಗಳ ನಂತರ ಆಯೋಗವು ಈ ಆದೇಶವನ್ನು ನೀಡಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆಯೋಗ ತಿಳಿಸಿದರೂ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.
ಈ ಘಟನೆ ನಡೆದ ಮಾರುಕಟ್ಟೆ ಹಿಂದೂ ಜನವಸತಿ ಪ್ರದೇಶದಲ್ಲಿದ್ದು, ದನದ ಮಾಂಸ ಸಾಗಿಸುವುದರಿಂದ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಜಿಲ್ಲಾಡಳಿತ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

“ಸಂತ್ರಸ್ತನನ್ನು ಜಾತಿ/ಧರ್ಮದ ಆಧಾರದ ಮೇಲೆ ಅವಮಾನಿಸಲಾಗಿದ್ದು, ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣವಾಗಿದ್ದು, ಸಂತ್ರಸ್ತನಿಗೆ ಪರಿಹಾರ ಒದಗಿಸುವುದು ರಾಜ್ಯದ ಹೊಣೆಯಾಗಿರುತ್ತದೆ’’ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿರುವ NHRC ಆದೇಶ ಹೇಳುತ್ತದೆ.

ಸಂತ್ರಸ್ತನಿಗೆ ಪರಿಹಾರದ ಮೊತ್ತವನ್ನು ಪಾವತಿಸಲು ಅಸ್ಸಾಂ ಸರಕಾರಕ್ಕೆ ನಿರ್ದೇಶನ ನೀಡಿರುವ NHRC, ಆರು ವಾರಗಳೊಳಗೆ ಪಾವತಿಯ ಪುರಾವೆಗಳನ್ನು ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ನೀಡಿದೆ.


Prasthutha News

Leave a Reply

Your email address will not be published. Required fields are marked *