ಸುರತ್ಕಲ್ ಫ್ಲೈಓವರ್ ನಡಿ ಸಾವರ್ಕರ್ ಫೋಟೊ ಹಾಕಿದ ಸಂಘಪರಿವಾರ: ತೆರವುಗೊಳಿಸಿದ ಪೊಲೀಸರು

Prasthutha|

ಮಂಗಳೂರು: ಸುರತ್ಕಲ್ ಫ್ಲೈ ಓವರ್ ನ ಫಿಲ್ಲರ್ ಒಂದಕ್ಕೆ ಸಂಘಪರಿವಾರದ ಕಾರ್ಯಕರ್ತರು ಸಾವರ್ಕರ್ ಫೋಟೋವನ್ನು ಅಳವಡಿಸಿದ್ದು, ಪೊಲೀಸರು ತೆರವುಗೊಳಿಸಿದ್ದಾರೆ.

- Advertisement -

ಬ್ರಿಟಿಷರೊಂದಿಗೆ ಕ್ಷಮೆ ಕೇಳಿದ ಸಾವರ್ಕರ್ ಫೋಟೊವನ್ನು ಹಾಕಿದಕ್ಕೆ SDPI ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪೊಲೀಸ್ ಅಧಿಕಾರಿಗಳಿಗೆ, ಮಹಾನಗರ ಪಾಲಿಕೆ ಆಯುಕ್ತರಿಗೆ ಮಾಹಿತಿ ಕೂಡ ನೀಡಿತ್ತು. ಕೂಡಲೇ ಇದನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಾವರ್ಕರ್ ಫೋಟೋವನ್ನು ಪೊಲೀಸರು ತೆರವುಗೊಳಿಸಿದ್ದು, Sdpi ಜಿಲ್ಲಾ ಸಮಿತಿಯು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದೆ.

- Advertisement -

Join Whatsapp