ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕೊರೋನಾ ದೃಢ

Prasthutha|

ದೆಹಲಿ:  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ​ಗೆ ಕೊರೊನಾ ಸೋಂಕು ದೃಢವಾಗಿದೆ.

- Advertisement -

ಈ ಬಗ್ಗೆ ಕೇಜ್ರಿವಾಲ್​ ಟ್ವೀಟ್ ಮಾಡಿದ್ದು, ನನಗೆ ಕೊರೋನಾದ ಸೌಮ್ಯ ಲಕ್ಷಣಗಳು ಇವೆ. ಕಳೆದ ಕೆಲವು ದಿನಗಳಿಂದಲೂ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್-​ 19 ತಪಾಸಣೆ ಮಾಡಿಸಿಕೊಳ್ಳಿ. ಐಸೋಲೇಟ್​ ಆಗಿ ಎಂದು ಮನವಿ ಮಾಡಿದ್ದಾರೆ. ನನಗೆ ಕೊವಿಡ್​ 19 ಸೋಂಕು ತಗುಲಿದೆ ಎಂದಷ್ಟೇ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ. ಹಾಗಾಗಿ, ಒಮಿಕ್ರಾನ್​ ಸೋಂಕಿಗೆ ಒಳಗಾಗಿದ್ದಾರೋ, ಅಥವಾ ಕೊರೋನಾ ಸೋಂಕೋ ಎಂಬುದಿನ್ನೂ ದೃಢಪಟ್ಟಿಲ್ಲ. ಸದ್ಯ ಅರವಿಂದ್ ಕೇಜ್ರಿವಾಲ್​ ಐಸೋಲೇಟ್ ಆಗಿದ್ದಾರೆ.

Join Whatsapp