ಬುಲ್ಲಿ ಬಾಯ್ ಆ್ಯಪ್​ ಕೇಸ್​: ಬೆಂಗಳೂರು ಮೂಲದ ವಿದ್ಯಾರ್ಥಿ ವಶಕ್ಕೆ

Prasthutha|

- Advertisement -

ಮುಂಬೈ : ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಆರೋಪಿಯ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯ ಕುರಿತು ಬೇರೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆತನನ್ನು ಮುಂಬೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಶಂಕಿತರಿದ್ದು, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಬಂಧಿತ ವಿದ್ಯಾರ್ಥಿಯ ಕುರಿತು ಬೇರೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆತನನ್ನು ಮುಂಬೈಗೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಶಂಕಿತರಿದ್ದು, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಬುಲ್ಲಿಬಾಯ್ ಆ್ಯಪ್:

ಬುಲ್ಲಿ ಬಾಯ್ ಇಂದೊಂದು ಮೊಬೈಲ್ ಅಪ್ಲಿಕೇಷನ್​​ ಆಗಿದ್ದು, ಈ ಅಪ್ಲಿಕೇಷನ್​ ಗೂಗಲ್ ಪ್ಲೇಸ್ಟೋರ್ ರೀತಿಯ ಮತ್ತೊಂದು ಪ್ಲಾಟ್​ ಫಾರ್ಮ್ ಆದ ಗಿಟ್​ ಹಬ್​​ ನಲ್ಲಿ ದೊರೆಯುತ್ತದೆ. ಈ ಅಪ್ಲಿಕೇಷನ್​ನಲ್ಲಿ ಮುಸ್ಲಿಂ ಮಹಿಳೆಯರ ತಿರುಚಲಾದ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು ಎಂದು ಮಹಿಳಾ ಪತ್ರಕರ್ತೆಯೊಬ್ಬರು ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡಿದ್ದರು.

ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ನವಾಬ್ ಮಲಿಕ್ ಈ ಬಗ್ಗೆ ಗೃಹ ಇಲಾಖೆಗೆ ದೂರು ನೀಡುವುದಾಗಿ ಹೇಳಿದ್ದರು. ಮತ್ತೊಂದೆಡೆ ಪೊಲೀಸರು ಬುಲ್ಲಿಬಾಯ್ ಆ್ಯಪ್, ಗಿಟ್​ ಹಬ್ ಮತ್ತು ಬುಲ್ಲಿಬಾಯ್ ಆ್ಯಪ್ ಅನ್ನು ಪ್ರಮೋಟ್ ಮಾಡುವ ಟ್ವಿಟರ್​ ಹ್ಯಾಂಡಲ್​ ಗಳ ಮೇಲೆ ದೂರನ್ನು ದಾಖಲಿಸಿ, ತನಿಖೆ ನಡೆಸಿದ್ದರು.

ದೆಹಲಿಯಲ್ಲೂ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಕರಣದ ತನಿಖೆಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಪೊಲೀಸ್ ಸಂಸ್ಥೆಗಳೊಂದಿಗೆ ಕೇಂದ್ರ ಸರ್ಕಾರವೂ ಕೆಲಸ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ದ್ದರು.

Join Whatsapp