‘ಉ.ಪ್ರದಲ್ಲಿ ಮಹಿಳೆಯರು ದ್ವೇಷದ ರಾಜಕೀಯವನ್ನು ಕೊನೆಗೊಳಿಸಲಿದ್ದಾರೆ’: ಪ್ರಿಯಾಂಕಾ ಗಾಂಧಿ

Prasthutha|

►ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್!

- Advertisement -

ಲಕ್ನೋ: ಉತ್ತರ ಪ್ರದೇಶದಲ್ಲಿ ಮಹಿಳೆಯರು ದ್ವೇಷದ ರಾಜಕೀಯವನ್ನು ಕೊನೆಗೊಳಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇ .40 ರಷ್ಟು ಸ್ಥಾನಗಳನ್ನು ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಪ್ರಿಯಾಂಕಾ ಲಕ್ನೋದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. “ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಸಕ್ರಿಯರಾಗಿರುತ್ತಾರೆ. ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದರಿಂದ ಮಹಿಳೆಯರನ್ನು ತೃಪ್ತಿಪಡಿಸಬಹುದು ಎಂದು ರಾಜಕೀಯ ಪಕ್ಷಗಳು ಭಾವಿಸಿದೆ. ದ್ವೇಷದ ರಾಜಕಾರಣವನ್ನು ಮಹಿಳೆಯರು ಮಾತ್ರ ಕೊನೆಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

- Advertisement -

ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಕೈಜೋಡಿಸುವಂತೆ ಪ್ರಿಯಾಂಕಾ ಈ ವೇಳೆ ಕೇಳಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಿಯಾಂಕಾ ಲಕ್ನೋದಲ್ಲೇ ನೆಲೆಸಿ ಪ್ರಚಾರ ಮಾಡಲು ಯೋಜಿಸಿದ್ದಾರೆ.



Join Whatsapp