ಮೋದಿಗೆ ಟೆಲಿಪ್ರಾಂಪ್ಟರ್ ಎದುರು ಕುಳಿತು ಸದ್ದು ಮಾಡುವುದೇ ಖಯಾಲಿ : ಕಾಂಗ್ರೆಸ್ ವ್ಯಂಗ್ಯ

Prasthutha|

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ, ಖಾಲಿ ಡಬ್ಬದಂತೆ ಟೆಲಿಪ್ರಾಂಪ್ಟರ್ ಎದುರು ಕುಳಿತು ಸದ್ದು ಮಾಡುವುದೇ ಅವರ ಖಯಾಲಿ ಎಂದು ಕಾಂಗ್ರೆಸ್ ಟೀಕಿಸಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಲಸಿಕೆ ನೀಡುವಿಕೆಯಲ್ಲಿ ವಿಫಲವಾಗಿ ಹುರುಳಿಲ್ಲದ ಮಾತುಗಳನ್ನು ಹೆಡ್ಲೈನ್ಗಳನ್ನಾಗಿಸುವುದೇ ಅವರ ತಂತ್ರ. ಧೈರ್ಯವಿದ್ದರೆ ಪತ್ರಿಕಾಗೋಷ್ಠಿ ನಡೆಸಿ ದೇಶದ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದೆ.

- Advertisement -


ಉಚಿತ ಲಸಿಕೆ ನೀಡುವಿಕೆಯಲ್ಲಿ ಯಾವುದೇ ಕಾರ್ಯಸೂಚಿ ಇಲ್ಲ. ಕುಸಿದ ಆರ್ಥಿಕತೆಯ ಚೇತರಿಕೆಗೆ ಯಾವುದೇ ಚಿಂತನೆ ಇಲ್ಲ. ಉದ್ಯೋಗ ನಷ್ಟ ತಪ್ಪಿಸಲು ಯಾವುದೇ ಯೋಜನೆ ಇಲ್ಲ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಬೆಲೆ ಏರಿಕೆ ನಿಯಂತ್ರಿಸಿ ಜನತೆಗೆ ನೆರವಾಗುವ ಹೃದಯವಂತಿಕೆ ಇಲ್ಲ. ಬಿಜೆಪಿಯ ಆದ್ಯತೆ ‘ಹೆಡ್ಲೈನ್ ಮ್ಯಾನೇಜ್ಮೆಂಟ್’ ಹಾಗೂ ‘ಚುನಾವಣೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -