ಜೂನ್ 6ರಿಂದ ದಕ್ಷಿಣ ಕನ್ನಡದಲ್ಲಿ ಕೋ ವ್ಯಾಕ್ಸಿನ್ ಲಭ್ಯ : ಜಿಲ್ಲಾಧಿಕಾರಿ

Prasthutha|

ಮಂಗಳೂರು : ಜೂನ್ 6ರಿಂದ ದ.ಕ ಜಿಲ್ಲೆಯಲ್ಲಿ ಕೋ ವಾಕ್ಸಿನ್ ಲಸಿಕೆ ಲಭ್ಯವಿದ್ದು, ಜಿಲ್ಲೆಗೆ ಒಟ್ಟು 13ಸಾವಿರ ಡೋಸ್ ಕೋ ವ್ಯಾಕ್ಸಿನ್ ಸರಬರಾಜು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದ್ದಾರೆ.

- Advertisement -

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕಾ ಶಿಬಿರ ಆಯೋಜಿಸಲಾಗುವುದು. ಭಾನುವಾರ 6 ತಾರೀಕಿನಿಂದ ನಿತ್ಯ ಲಸಿಕಾ ಶಿಬಿರ ನಡೆಯಲಿದೆ. ಫಸ್ಟ್ ಡೋಸ್ ಪಡೆದು 4ರಿಂದ 6 ವಾರ ಪೂರ್ಣ ಗೊಳಿಸಿ ಅರ್ಹರು ವ್ಯಾಕ್ಸಿನ್ ಪಡೆಯಬಹುದಾಗಿದೆ.

ಜಿಲ್ಲೆಯ ಯಾವುದೇ ಕೇಂದ್ರಲ್ಲಿ ಮುಂಜಾನೆ 6 ರಿಂದ ಸಂಜೆ 4 ವರೆಗೆ ಲಸಿಕೆ ಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಜಿಲ್ಲೆಯಲ್ಲಿ ಕೊವಿಡ್ ಲಸಿಕಾ ಕೇಂದ್ರದಲ್ಲಿ ಜನರು ಮುಂಜಾನೆಯಿಂದಲೇ ಕ್ಯೂ ನಿಲ್ಲುವ ಬಗ್ಗೆ ಜನರಲ್ಲಿ ಅನೇಕ ಗೊಂದಲವಿರುವ ಹಿನ್ನೆಲೆಯಲ್ಲಿ ನಗರದ ಆರೋಗ್ಯ ಕೇಂದ್ರಗಳಾದ ಜೆಪ್ಪು, ಎಕ್ಕೂರು, ಪಡೀಲ್, ಶಕ್ತಿನಗರ, ಕುಂಜತ್ ಬೈಲ್, ಬಿಜೈ ಕಾಪಿಕಾಡ್(ಲೇಡಿಹಿಲ್), ಕುಳಾಯಿ, ಕಸಬ ಬೆಂಗ್ರೆ, ಬಂದರ್, ಸುರತ್ಕಲ್, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ, ನಗರ ಆರೋಗ್ಯ ಕೇಂದ್ರ ಬಂಟ್ವಾಳ, ಪುತ್ತೂರು ಸೇರಿದಂತೆ ಆನ್ ಲೈನ್ ನೊಂದಣಿ ಆರಂಭಿಸಲಾಗುವುದೆಂದು ಅವರು ತಿಳಿಸಿದ್ದಾರೆ.

45ವರ್ಷ ಮೇಲ್ಪಟ್ಟವರು ಮಂಗಳೂರು, ಬಂಟ್ವಾಳ, ಪುತ್ತೂರು ನಗರ ಆರೋಗ್ಯ ಕೇಂದ್ರದಲ್ಲಿ ಕೋವಿನ್ ಮೂಲಕ ನೊಂದಣಿ ಮಾಡಬೇಕು. ಬಳಿಕ ಸ್ಥಳ, ಸಮಯ ನಿಗದಿ ಪಡಿಸಿ ಲಸಿಕೆ ಹಾಕಲು ಸೂಚನೆ ನೀಡಲಾಗುವುದು. ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆ ಪೈಕಿ ಆನ್ ಲೈನ್ ನೊಂದಾಯಿತರಿಗೆ 75 ಶೇ. ಲಸಿಕೆ ನೀಡಲಾಗುವುದು. ಉಳಿದ 25 ಶೇ ಲಸಿಕೆ 70 ವರ್ಷ ಮೇಲ್ಪಟ್ಟರಿಗಾಗಿ ಮೀಸಲಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Join Whatsapp