ಚಿಕ್ಕಮಗಳೂರು : ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಯುವಕರ ಹೋರಾಟ

ಶೃಂಗೇರಿ: ನೂರು ಬೆಡ್ ನ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ  ಸಮಾನ ಮನಸ್ಕ ಯುವಕರು ಹೋರಾಟಕ್ಕೆ ತಯಾರಾಗಿದ್ದಾರೆ.  

ಮೈಕ್ ಮೂಲಕ ಪ್ರಚಾರಕ್ಕೆ ಅನುಮತಿ ನೀಡದ ಪೋಲಿಸ್ ಇಲಾಖೆ ವಿರುದ್ಧ ಆಕ್ರೋಶಗೊಂಡ ಯುವಕರು ತಮಟೆ ಬಾರಿಸುತ್ತ ಶೃಂಗೇರಿಯ ಬೀದಿಗಳಲ್ಲಿ  ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.

- Advertisement -

ಕಳೆದ ವರ್ಷ ಶೃಂಗೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ವೇಳೆ ಒಂದು ತಿಂಗಳ ಒಳಗಾಗಿ ಆಸ್ಪತ್ರೆ ಮಂಜೂರು ಮಾಡುತ್ತೇವೆ ಎಂದು  ಅಧಿಕಾರಿಗಳು ಭರವಸೆ ನೀಡಿದ್ದರು. ಇತ್ತೀಚಿಗೆ  ಶೃಂಗೇರಿ ಭೇಟಿ ವೇಳೆ ಸಿಎಂ ಬೊಮ್ಮಾಯಿ ಅವರೂ ಮಾತು ಕೊಟ್ಟಿದ್ದರು. ಆದರೆ ಭರವಸೆಗಳು ಬರೀ ಬಾಯಿ ಮಾತುಗಳಾಗಿ ಬಾಕಿಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವಕರು ಮತ್ತೆ ಹೋರಾಟ ರಂಗಕ್ಕೆ ಧುಮುಕಿದ್ದಾರೆ.