ಸಿಮಿ ಸಂಘಟನೆ ನಿಷೇಧಿಸಿದ್ದನ್ನು ಸಮರ್ಥಿಸಿ ಕೇಂದ್ರ ಸರ್ಕಾರದಿಂದ ಅಫಿದವಿತ್ ಸಲ್ಲಿಕೆ

Prasthutha|

ನವದೆಹಲಿ: ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಇನ್ ಇಂಡಿಯಾ- ಸಿಮಿ ಸಂಘಟನೆಯ ನಿಷೇಧವನ್ನು ಪುಷ್ಟೀಕರಿಸಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿನಲ್ಲಿ ಅಫಿದವಿಟ್ ಸಲ್ಲಿಸಿದೆ.
ಸಿಮಿ ತನ್ನ ಧ್ಯೇಯೋದ್ದೇಶಗಳಲ್ಲಿ ತನ್ನ ದೇಶದಲ್ಲಿ ಇಸ್ಲಾಮಿಕ್ ಪದ್ಧತಿ ಜಾರಿಗೆ ತರುವುದಾಗಿ ಬರೆದುಕೊಂಡಿದೆ. ಇಂತಹ ಉದ್ಧೇಶವು ದೇಶದ ಜಾತ್ಯತೀತ, ಸಾರ್ವಭೌಮ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದಾಗಿದೆ ಎಂದು ಕೇಂದ್ರವು ಅಫಿಡವಿತ್’ನಲ್ಲಿ ಹೇಳಿದೆ.

- Advertisement -


ಸಿಮಿಯು 1977ರ ಏಪ್ರಿಲ್ 25ರಂದು ಹುಟ್ಟಿದ್ದು ಅದರ ಕಾರ್ಯಸೂಚಿಯಲ್ಲಿ ಇಲ್ಲಿನ ರಾಷ್ಟ್ರೀಯತೆಯನ್ನು ಅಳಿಸಿ ಧರ್ಮ ಯುದ್ಧ ಜಿಹಾದ್ ಮೂಲಕ ದೇಶದಲ್ಲಿ ಖಲೀಪರ ಹಿಡಿತದ ಇಸ್ಲಾಮೀ ನಿಯಮಾವಳಿ ಜಾರಿಗೆ ತರುವುದು ಸೇರಿದೆ ಎಂದು ಕೇಂದ್ರ ಹೇಳಿದೆ.
“ಸಿಮಿಯು ಭಾರತದ ಸಂವಿಧಾನ, ರಾಷ್ಟ್ರೀಯತೆ, ಜಾತ್ಯತೀತತೆಯನ್ನೂ ನಂಬುವುದಿಲ್ಲ. ಮೂರ್ತಿ ಪೂಜೆಯನ್ನು ಪಾಪವೆಂದು ಬಗೆದು ಅದನ್ನು ತೊಡೆಯುವುದು ತಮ್ಮ ಕರ್ತವ್ಯವೆಂದು ತಿಳಿದುಕೊಂಡಿದೆ” ಎಂದೂ ಅಫಿಡವಿತ್’ನಲ್ಲಿ ಹೇಳಲಾಗಿದೆ.


ಸಿಮಿಯು ಜಮ್ಮು ಕಾಶ್ಮೀರದ ಹಾಗೂ ಇತರೆಡೆಯ ಹಲವು ಮೂಲಭೂತವಾದಿ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದೆ. ಹಿಜ್ಬುಲ್ ಮುಜಾಹಿದೀನ್, ಲಷ್ಕರೆ ಎ ತಯ್ಬಾದಂತಹ ರಾಷ್ಟ್ರ ವಿರೋಧಿ ಗುರಿ ಸಾಧಿಸಲು ಸಿಮಿ ಜೊತೆಗೆ ಸೇರಿಕೊಂಡಿವೆ ಎಂದೂ ಅಫಿಡವಿತ್’ನಲ್ಲಿದೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ -ಯುಎಪಿಎಯಡಿ 2019ರಲ್ಲಿ ಸಿಮಿ ನಿಷೇಧಿಸಿರುವುದನ್ನು ಹುಮಾಮ್ ಅಹ್ಮದ್ ಸಿದ್ದಿಕಿ ಎನ್ನುವವರೊಬ್ಬರು ವಿಶೇಷ ಅರ್ಜಿಯಾಗಿ ಪ್ರಶ್ನಿಸಿರುವುದರಿಂದ ಅದಕ್ಕೆ ವಿರುದ್ಧವಾಗಿ ಕೇಂದ್ರದ ಅಫಿಡವಿತ್ ಸಲ್ಲಿಕೆಯಾಗಿದೆ.

Join Whatsapp