ಜೂನ್ 26ರಂದು ಲೋಕಸಭೆಯ ಹೊಸ ಸ್ಪೀಕರ್ ಆಯ್ಕೆ

Prasthutha|

ನವದೆಹಲಿ: 18ನೇ ಲೋಕಸಭೆಯ ಹೊಸ ಸ್ಪೀಕರ್ ಆಯ್ಕೆ ಜೂನ್ 26 ರಂದು ನಡೆಯಲಿದೆ. ಅಭ್ಯರ್ಥಿಯನ್ನು ಬೆಂಬಲಿಸುವ ಪತ್ರವನ್ನು ಸಂಸದರು ಒಂದು ದಿನ ಮೊದಲು ಅಂದರೆ, ಜೂನ್ 25ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು ಎಂದು ಲೋಕಸಭೆಯ ಸೆಕ್ರೆಟರಿಯೇಟ್ ತಿಳಿಸಿದೆ.

- Advertisement -

18ನೇ ಲೋಕಸಭೆಯು ಜೂನ್ 24 ರಂದು ಮೊದಲ ಬಾರಿಗೆ ಸಭೆ ಸೇರಲಿದ್ದು, ಜುಲೈ 3 ರಂದು ಅಧಿವೇಶನ ಮುಕ್ತಾಯವಾಗಲಿದೆ.

ಲೋಕಸಭೆ ಸ್ಪೀಕರ್ ಚುನಾವಣೆಗೆ ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದಂದು ಮಧ್ಯಾಹ್ನ 12 ಗಂಟೆಯವರೆಗೆ ಯಾವುದೇ ಸಮಯದಲ್ಲಿ, ಯಾವುದೇ ಸದಸ್ಯರು ಸ್ಪೀಕರ್ ಕಚೇರಿಗೆ ಇನ್ನೊಬ್ಬ ಸದಸ್ಯರನ್ನು ಬೆಂಬಲಿಸುವ ಪತ್ರವನ್ನು ಮಹಾಲೇಖಪಾಲರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಲೋಕಸಭೆಯ ಬುಲೆಟಿನ್ ತಿಳಿಸಿದೆ.

Join Whatsapp