ಚನ್ನಪಟ್ಟಣದಿಂದ ದರ್ಶನ್ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದ ಡಿಕೆ ಬ್ರದರ್ಸ್: ಸಿಪಿ ಯೋಗೇಶ್ವರ್ ಸ್ಫೋಟಕ ಹೇಳಿಕೆ

Prasthutha|

ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಡಿ.ಕೆ. ಸಹೋದರರು ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವುದಾಗಿ ಹೇಳಿದ್ದರು. ಆದರೆ, ಆ ಅಚ್ಚರಿ ಅಭ್ಯರ್ಥಿ ಇದೀಗ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು, ನಟ ದರ್ಶನ್ ಕುರಿತು ಪರೋಕ್ಷವಾಗಿ ಅಚ್ಚರಿಯ ಹೇಳಿಕೆ ನೀಡಿದರು.

- Advertisement -


ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದು ಈ ಹಿಂದೆ ಡಿ.ಕೆ.ಸುರೇಶ್ ಹೇಳಿದ್ದರು. ಆದರೆ ಆ ಅಚ್ಚರಿ ಅಭ್ಯರ್ಥಿ ಈಗ ಜೈಲುಪಾಲಾಗಿದ್ದಾರೆ. ನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದರು. ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಡಿಕೆ ಬ್ರದರ್ಸ್ ಪ್ಲಾನ್ ಮಾಡಿದ್ದ. ಆ ವ್ಯಕ್ತಿ ಯಾರು ಅಂತಾ ನೀವೇ ಊಹಿಸಿಕೊಳ್ಳಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ದರ್ಶನ್ ಮೇಲೆ ಕೊಲೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೊಂದು ವಿಚಿತ್ರ ಕೇಸ್ ಅನ್ನಿಸುತ್ತಿದೆ. ರಾಜಕೀಯಕ್ಕೆ ಬರಬೇಕು ಅಂತ ಆಸೆ ಇತ್ತೇನೋ ಆದರೆ ಈ ರೀತಿ ಅನಾಹುತ ಆಗಿ ಹೋಗಿದೆ. ನೋಡೊಣ ಎಂದು ಹೇಳಿದ್ದಾರೆ.

Join Whatsapp