ನ್ಯಾಯಾಂಗ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ | 16 ಮಂದಿಯ ವಿರುದ್ಧ ಸಿಬಿಐ ಎಫ್ ಐಆರ್ ದಾಖಲು

Prasthutha|

ಹೈದರಾಬಾದ್ : ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ಸುಪ್ರೀಂ ಕೋರ್ಟ್ ಹಾಗೂ ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೈದ 16 ಮಂದಿಯ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ.

- Advertisement -

ವೈಎಸ್ ಆರ್ ಸಿಪಿ ನಾಯಕರಿಂದ ನ್ಯಾಯಾಂಗ ವಿರುದ್ಧ ನಿಂದನಾತ್ಮಕ ಹೇಳಿಕೆಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಂಧ್ರ ಪ್ರದೇಶ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿಬಿಐ ಈ ಕ್ರಮ ಕೈಗೊಂಡಿದೆ.

ಕೆಲವು ನ್ಯಾಯಮೂರ್ತಿಗಳ ಬಗ್ಗೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದುದಕ್ಕಾಗಿ ನಡೆಯುತ್ತಿದ್ದ ಸಿಐಡಿ ತನಿಖೆಯ ಕುರಿತು ಅಸಮಾಧಾನಿತವಾದ ಹೈಕೋರ್ಟ್ ಈ ತೀರ್ಪು ನೀಡಿದೆ.

- Advertisement -

ಕೊಂಡಾ ರೆಡ್ಡಿ ಧಮಿರೆಡ್ಡಿ, ಮಣಿ ಅನ್ನಾಪು ರೆಡ್ಡಿ, ಸುಧೀರ್ ಪಮುಲ, ಆದರ್ಶ ರೆಡ್ಡಿ, ಅಭಿಷೇಕ್ ರೆಡ್ಡಿ, ಶಿವ ರೆಡ್ಡಿ, ಶ್ರೀಧರ್ ರೆಡ್ಡಿ, ಜಲಗಂ ವೆಂಕಟ ಸತ್ಯನಾರಾಯಣ, ಶ್ರೀಧರ್ ರೆಡ್ಡಿ, ಲಿಂಗಾ ರೆಡ್ಡಿ, ಚಂದು ರೆಡ್ಡಿ, ಶ್ರೀನಾಥ್ ಸುಸ್ವರಂ, ಕಿಶೋರ್ ರೆಡ್ಡಿ ದರಿಸ, ಚಿರಂಜೀವಿ ರೆಡ್ಡಿ, ಲಿಂಗಾ ರೆಡ್ಡಿ ರಾಜಶೇಖರ್, ಕೆ. ಗೌತಮಿ ಮುಂತಾದವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಬ್ಬ ಆರೋಪಿ ಅಪರಿಚಿತ ವ್ಯಕ್ತಿ ಎಂದು ಗುರುತಿಸಲಾಗಿದೆ.  

Join Whatsapp