ಬಿಹಾರದ ನೂತನ ಸರಕಾರದಲ್ಲಿ ಒಬ್ಬರೇ ಒಬ್ಬ ಮುಸ್ಲಿಮರಿಲ್ಲ!

Prasthutha|

ಪಾಟ್ನಾ : ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಬಿಹಾರದ ಆಡಳಿತಾರೂಢ ಮೈತ್ರಿಕೂಟ ಸರಕಾರದಲ್ಲಿ ಒಬ್ಬರೇ ಒಬ್ಬ ಮುಸ್ಲಿಮರಿಲ್ಲ. ಇದು ಬಿಹಾರದ ದೊಡ್ಡ ಸಮುದಾಯವೊಂದಕ್ಕೆ ಆಗಿರುವ ಬಹುದೊಡ್ಡ ಹಿನ್ನಡೆ. ಬಿಹಾರ ಸೇರಿದಂತೆ ದೇಶದ ಮುಸ್ಲಿಮರಿಗೆ ಇದು ಕಳವಳ ಪಡುವ ವಿಚಾರ ಎಂದು ಅಭಿಪ್ರಾಯ ಪಡಲಾಗಿದೆ.

- Advertisement -

ಇಲ್ಲಿ ಏನಾಯಿತು? ಯಾಕೆ ಹೀಗಾಯಿತು? ಯಾವ ಅಂಶಗಳು ಇದರ ಹಿಂದಿವೆ? ಯಾವ ತಪ್ಪುಗಳು ನಡೆದವು? ಎಂಬುದರ ಬಗ್ಗೆ ಗಂಭೀರ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ಬಿಜೆಪಿ ಪರ ಸಂಘಟನೆಗಳು ಕಾಂಗ್ರೆಸ್ ಅನ್ನು ಈಗ ಮುಸ್ಲಿಂ ಪಕ್ಷ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಇನ್ನೊಂದೆಡೆ, ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಅವರಂತಹ ಮುಸ್ಲಿಂ ನಾಯಕರ ಪಕ್ಷಗಳನ್ನೂ ನಂಬದಂತಹ ಸ್ಥಿತಿ ನಿರ್ಮಿಸಲಾಗಿದೆ. ಇದೇ ತಂತ್ರಗಾರಿಕೆಯನ್ನು ಪಶ್ಚಿಮ ಬಂಗಾಳದ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ.

- Advertisement -

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಮುಸ್ಲಿಮ್ ಪಕ್ಷ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಎಐಎಂಐಎಂ ಕೂಡ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸುವುದರಿಂದ, ಮುಂದಿನ ಚುನಾವಣೆಯಲ್ಲಿ ಟಿಎಂಸಿ ಏನಾದರೂ ಸೋತರೆ ಅದನ್ನು ಎಐಎಂಐಎಂ ಪಕ್ಷದ ತಲೆಗೆ ಕಟ್ಟಲು ಈಗಲೇ ವೇದಿಕೆ ಸಿದ್ಧವಾಗುತ್ತಿದೆ.

ಕೇರಳದಲ್ಲಿ ಮುಸ್ಲಿಂ ನಾಯಕತ್ವದ ಎಐಯುಎಂಎಲ್, ಅಸ್ಸಾಂನಲ್ಲಿ ಎಐಯುಡಿಎಫ್, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಎಐಎಂಐಎಂ ಪಕ್ಷಗಳ ನಡೆ ಮೆಚ್ಚತಕ್ಕದ್ದೇ. ಆದರೆ, ಈ ಎಲ್ಲಾ ಪಕ್ಷಗಳು ರಾಜ್ಯಮಟ್ಟದಲ್ಲಿಯೇ ಉಳಿಯುವುದರ ಬದಲು, ರಾಷ್ಟ್ರಮಟ್ಟದಲ್ಲಿ ಒಂದೇ ವೇದಿಕೆಯಡಿ ಬಂದು, ಅಗತ್ಯಬಿದ್ದಾಗಲೆಲ್ಲಾ ಒಂದಷ್ಟು ಸಾಧನೆಗಳನ್ನು ಮಾಡಬಹುದು. ಇಲ್ಲವಾದರೆ, ವಿಧಾನಸಭೆಯಲ್ಲಿ ಕೊನೆ ಸಾಲಿನಲ್ಲಿ ಕುಳಿತು ಪ್ರತಿಭಟನೆ ಮಾಡಬೇಕಷ್ಟೇ ಎಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಬಗ್ಗೆ ಮುಸ್ಲಿಮ್ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ನಾಯಕತ್ವ ಸರಿಯಾದ ನಿಟ್ಟಿನಲ್ಲಿ ಯೋಚಿಸಬೇಕಿದೆ ಮತ್ತು ಅದಕ್ಕೆ ಇದು ಸರಿಯಾದ ಸಂದರ್ಭ.

Join Whatsapp