ಮಹಿಳೆ ಆತ್ಮಹತ್ಯೆಗೆ ಮತಾಂತರದ ಬಣ್ಣ ಹಚ್ಚಿದ ಉಡುಪಿ ‘ದಿಗ್ವಿಜಯ ನ್ಯೂಸ್’ ಪತ್ರಕರ್ತ : ಪ್ರಕರಣ ದಾಖಲು

Prasthutha: December 10, 2021

►ಈ ಪತ್ರಕರ್ತ ಉಡುಪಿ ಹಿಂದೂ ಜಾಗರಣಾ ವೇದಿಕೆಯ ನಾಯಕ !

ಮಣಿಪಾಲ : ಉಡುಪಿಯ ಮಹಿಳೆಯೋರ್ವರ ಆತ್ಮಹತ್ಯೆಯನ್ನು ಮತಾಂತರವೆಂದು ಕೋಮು ಬಣ್ಣ ಹಚ್ಚಿ ಅಶಾಂತಿ ಹರಡಲು ಪ್ರಯತ್ನಿಸಿದ್ದ ‘ದಿಗ್ವಿಜಯ್ ನ್ಯೂಸ್’ ಚಾನೆಲಿನ ಉಡುಪಿ ವರದಿಗಾರ ಶ್ರೀಕಾಂತ್ ಎಂಬವನ ವಿರುದ್ಧ ಪೊಲೀಸರು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

ಉಡುಪಿ ಜಿಲ್ಲೆಯ ಬಡಗಬೆಟ್ಟುವಿನಲ್ಲಿ ವಾಸವಿರುವ ವೆಂಕಟೇಶ್ ಎಂಬವರ ಪತ್ನಿ ಜಯಲಕ್ಷ್ಮಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಡಿಸಂಬರ್ 6 ರಂದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿದೆ.

ಆದರೆ ಈ ಆತ್ಮಹತ್ಯೆಯನ್ನು ‘ದಿಗ್ವಿಜಯ್ ನ್ಯೂಸ್’ ನ ಉಡುಪಿ ವರದಿಗಾರ ಅದನ್ನು ಮತಾಂತರ ಎಂದು ಬಿಂಬಿಸಿ ಡಿಸಂಬರ್ 7 ರಂದು ‘ದಿಗ್ವಿಜಯ್ ನ್ಯೂಸ್’ ಚಾನೆಲಿನಲ್ಲಿ ವಿಶೇಷ ವರದಿ ಪ್ರಸಾರವಾಗುವಂತೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮೃತ ಜಯಲಕ್ಷ್ಮಿಯ ಪತಿ ವೆಂಕಟೇಶ್ ಅವರೇ ಪೊಲೀಸ್ ದೂರು ನೀಡಿದ್ದು, ಅದರಂತೆ ಮಣಿಪಾಲ ಠಾಣೆಯಲ್ಲಿ ಆರೋಪಿ ವರದಿಗಾರ ಶ್ರೀಕಾಂತನ ವಿರುದ್ಧ ಅಪರಾಧ ಕ್ರಮಾಂಕ 164/2021,  ಐಪಿಸಿ ಕಲಂ 3(1)(u) ಎಸ್ಸಿ/ಎಸ್ಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

‘ದಿಗ್ವಿಜಯ್ ನ್ಯೂಸ್’ನ ಉಡುಪಿ ವರದಿಗಾರ ಉಡುಪಿ ಹಿಂದೂ ಜಾಗರಣಾ ವೇದಿಕೆಯ ಮುಖಂಡನೂ ಆಗಿದ್ದು, ಸಭೆಗಳಲ್ಲಿ ಪ್ರಚೋದನಕಾರಿ ಭಾಷಣಗಳಿಗೆ ಕುಖ್ಯಾತಿ ಹೊಂದಿದ್ದಾನೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!