January 25, 2021

ಲಘು ವಿಮಾನ ದುರಂತ | ನಾಲ್ವರು ಫೂಟ್ಬಾಲ್ ಆಟಗಾರರು ಸೇರಿ 6 ಮಂದಿಯ ದುರ್ಮರಣ

ರಿಯೊ ಡಿ ಜೆನೈರೊ : ಲಘು ವಿಮಾನವೊಂದರು ಟೇಕ್ ಆಫ್ ವೇಳೆ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ನಾಲ್ವರು ಫೂಟ್ಬಾಲ್ ಆಟಗಾರರು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಆಟಗಾರರಿಗದ್ದ ವಿಮಾನ ಅಪಘಾತಕ್ಕೀಡಾಗಿದೆ.

ಬ್ರೆಝಿಲ್ ನ ಟೊಕೆಂಟೈನ್ಸ್ ರಾಜ್ಯದ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಫೂಟ್ಬಾಲ್ ಆಟಗಾರರು ಬ್ರೆಝಿಲ್ ನ ಗೊಯಾನಿಯಾದಲ್ಲಿ ವಿಲಾ ನೊವಾ ತಂಡದ ವಿರುದ್ಧ ಆಡುವುದಕ್ಕಾಗಿ ಪ್ರಯಾಣ ಕೈಗೊಂಡಿದ್ದರು.

ಫೂಟ್ಬಾಲ್ ಕ್ಲಬ್ ಅಧ್ಯಕ್ಷ ಲೂಕಾಸ್ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್, ಗುಲೆರ್ಮೆ ನೊಯೆ, ರಣುಲ್ ಮತ್ತು ಮಾರ್ಕಸ್ ಮೊಲಿನರಿ ಸಾವಿಗೀಡಾಗಿದ್ದಾರೆ.

ದುರಂತದಲ್ಲಿ ವಿಮಾನದ ಪೈಲಟ್ ಕೂಡ ಮೃತಪಟ್ಡಿದ್ದಾರೆ. ಕೋವಿಡ್ 19 ಪಾಸಿಟಿವ್ ಇದ್ದುದರಿಂದ, ಆಟಗಾರರು ತಮ್ಮ ಕ್ವಾರಂಟೈನ್ ಅವಧಿ ಮುಗಿದ ಕೊನೆಯ ದಿನದಂದು ಖಾಸಗಿ ವಿಮಾನದಲ್ಲಿ ಕ್ರೀಡಾಕೂಟ ನಡೆಯುವ ಸ್ಥಳಕ್ಕೆ ಪ್ರಯಾಣಿಸಲು ಉದ್ದೇಶಿಸಿದ್ದರು.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ