ರಾಜಸ್ಥಾನ । ಗಲಭೆ ಪೀಡಿತ ಕರೌಲಿ ಭೇಟಿಗೆ ಮುಂದಾದ ತೇಜಸ್ವಿ ಸೂರ್ಯ; ತಡೆದ ಪೊಲೀಸ್ ಇಲಾಖೆ

Prasthutha|

ನವದೆಹಲಿ: ರಾಮನವಮಿ ವೇಳೆ ರಾಜಸ್ಥಾನದ ಕರೌಲಿಯಲ್ಲಿ ಏರ್ಪಟ್ಟ ಗಲಭೆಯ ಬಳಿಕ ಅಲ್ಲಿಗೆ ಭೇಟಿ ನೀಡಲು ಮುಂದಾದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸ್ ಇಲಾಖೆ ತಡೆದು ನಿಲ್ಲಿಸಿದೆ.

- Advertisement -

ಗಲಭೆ ಪೀಡಿತ ಕರೌಲಿಗೆ ಭೇಟಿ ನೀಡಲು ಸಂಸದ ತೇಜಸ್ವಿ ಸೂರ್ಯ ಆಗಮಿಸಿದಾಗ ರಾಜ್ಯದ ದೌಸಾ ಗಡಿಯಲ್ಲಿ ಅವರನ್ನು ಪೊಲೀಸರು ತಡೆದಾಗ ಮತ್ತೊಬ್ಬ ಸಂಸದ ಸತೀಶ್ ಪೂನಿಯಾ ಮತ್ತು ಹಲವಾರು ಬೆಂಬಲಿಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಮಧ್ಯೆ ಸಂಸದ ಸೂರ್ಯ ಅವರು ಗಲಭೆ ಪೀಡಿತ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಟ್ವೀಟ್ ಮಾಡಿದ್ದರು ಮತ್ತು ಸಾರ್ವಜನಿಕರು ಅಲ್ಲಿಗೆ ತಲುಪುವಂತೆ ಕರೆ ನೀಡಿದ್ದರು.

- Advertisement -

ಈ ಮಧ್ಯೆ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವುದನ್ನು ಕಾಂಗ್ರೆಸ್ ಸರ್ಕಾರ ನಿರ್ಬಂಧಿಸಿದೆ ಎಂದು ಆರೋಪಿಸಿದ ಅವರು, ಅಲ್ಲಿಗೆ ತಲುಪಲು ಅವಕಾಶ ನೀಡುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಂಬಲಿಗರು ಬ್ಯಾರಿಕೇಡ್ ದಾಟಲು ಪ್ರಯತ್ನಿಸುವುದು ಮತ್ತು ರಾಜಸ್ಥಾನ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ನವರಾತ್ರಿ ಸಂದರ್ಭದಲ್ಲಿ ಕರೌಲಿಯಲ್ಲಿ ಎರಡು ಸಮುದಾಯಗಳ ನಡೆದು ಎಪ್ರಿಲ್ 2 ಘರ್ಷಣೆ ಏರ್ಪಟ್ಟಿದ್ದು, ರಾಜ್ಯದ ಕಾನೂನು ಮತ್ತು ಸುವ್ಯಸ್ಥೆಯನ್ನು ಕಾಪಾಡುವ ಸಲುವಾಗಿ ಏಪ್ರಿಲ್ 12ರ ವರೆಗೆ ಕರ್ಫ್ಯೂ ವಿಧಿಸಿದೆ.

ಘಟನೆಯಲ್ಲಿ ಅಂಗಡಿಗಳು, ನಿವಾಸಗಳನ್ನು ಸುಟ್ಟುಹಾಕಲಾಯಿತು ಮತ್ತು ನಗರದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಕರ್ಫ್ಯೂ ಹೇರಲಾಗಿತ್ತು.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಮಂಗಳವಾರ ಕರೌಲಿಗೆ ಭೇಟಿ ನೀಡಿದ್ದರು.

Join Whatsapp