ನಾಯಕರ ವಿರುದ್ಧ ಫೇಸ್ ಬುಕ್ ನಲ್ಲಿ ಆಕ್ರೋಶ: ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಿಜೆಪಿ ಸಂಸದ

Prasthutha|

ಕೋಲ್ಕತಾ, ಜುಲೈ 26 : ಬಿಜೆಪಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ವಿರುದ್ಧ ತಾವು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಪಕ್ಷದ ರಾಜ್ಯ ಯುವ ವಿಭಾಗದ ಮುಖ್ಯಸ್ಥ ಸೌಮಿತ್ರಾ ಖಾನ್ ತಮ್ಮ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

- Advertisement -

ಕೇಂದ್ರ ನಾಯಕತ್ವದ ಒತ್ತಾಯದ ಮೇರೆಗೆ ಬಿಜೆ ವೈ ಎಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಂಗಾಳದ ಬಿಷ್ಣಪುರದ ಸಂಸದರು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದರು.
ಇದರಿಂದ ಪಕ್ಷದಲ್ಲುಂಟಾದ ತೀವ್ರ ಚರ್ಚೆಯಿಂದಾಗಿ ಅಂತರ ಕಾಯ್ದುಕೊಂಡಿದ್ದರು. ಭಾನುವಾರ ನಡೆದ ಪಕ್ಷದ ಯುವ ವಿಭಾಗದ ಸಭೆಯಲ್ಲಿ ಖಾನ್ “ಫೇಸ್ಬುಕ್ ನಲ್ಲಿ ಹೇಳಿಕೆ ನೀಡಿರುವುದು ನನ್ನ ಕಡೆಯಿಂದ ನಡೆದ ಪ್ರಮಾದ” ಎಂದು ಹೇಳಿದರು.
ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿ, ನಾನು ಸೋಶಿಯಲ್ ಮೀಡಿಯಾದ ಅಂತಹ ಪ್ರತಿಕ್ರಿಯೆಯನ್ನು ಮಾಡಬಾರದಿತ್ತು ಈ ನಿಟ್ಟಿನಲ್ಲಿ ನಾನು ನಿಮ್ಮ ಕ್ಷಮೆಯಾಚಿಸುತ್ತಿದ್ದೇನೆ ಎಂದು ತಿಳಿಸಿದರು.

ಬಂಗಾಳದಲ್ಲಿ ನಡೆದ ಚುನಾವಣಾ ನಂತರದ ಹಿಂಸಾಚಾರದ ಬಗ್ಗೆ ಟಿಎಂಸಿಯನ್ನು ದೂಷಿಸಿದ ಅವರು ಮನೀಶ್ ಶುಕ್ಲಾ ಅವರಂತಹ ನಾಯಕರ ಸಾವು ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದರು.
ಸ್ಥಳೀಯ ಬಿಜೆಪಿ ಮುಖಂಡರಾದ ಮನೀಶ್ ಶುಕ್ಲಾ ಅವರನ್ನು ಕಳೆದ ಅಕ್ಟೋಬರ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

- Advertisement -

ಈ ತಿಂಗಳ ಆರಂಭದಲ್ಲಿ ಫೇಸ್ ಬುಕ್ ನಲ್ಲಿ ಸೌಮಿತ್ರ ಖಾನ್ , ಸುವೆಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ರವರು ಅವಹೇಳನಕಾರಿಯಾದ ಪೋಸ್ಟ್ ಹಿನ್ನೆಲೆಯಲ್ಲಿ ಭಾನುವಾರ ಸಂಸದರಾದ ಸೌಮಿತ್ರ ಖಾನ್ , ಸಾರ್ವಜನಿಕವಾಗಿ ಕ್ಷಮೆಯಾಚಣೆ ಮಾಡುವ ಮೂಲಕ ಈ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.

Join Whatsapp