ತರಕಾರಿಗಳಲ್ಲಿಯೇ ಅತ್ಯಂತ ಕಹಿಯಾದ ತರಕಾರಿ ಹಾಗಲಕಾಯಿ. ಆದರೆ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಇದು ಒಳಗೊಂಡಿದೆ.
ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಹಾಗಲಕಾಯಿಯಿಂದ ಸಿಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಮಧುಮೇಹ ಸಮಸ್ಯೆ ಇರುವವರು ಹಾಗಲಕಾಯಿ ರಸ ಸೇವನೆ ಮಾಡಿದರೆ ತುಂಬಾ ಪ್ರಯೋಜನವಿದೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ದೇಹದ ಕೊಲೆಸ್ಟ್ರಾಲ್ ಮಟ್ಟ ಕೂಡ ಹಾಗಲಕಾಯಿಯಿಂದ ನಿಯಂತ್ರಣ ವಾಗುತ್ತದೆ. ದೇಹದ ತೂಕ ಕಡಿಮೆ ಮಾಡುವಲ್ಲಿಯೂ ಹಾಗಲಕಾಯಿ ಪಾತ್ರವಹಿಸುತ್ತದೆ.
ಹಾಗಲಕಾಯಿ ರೋಗನಿರೋಧಕ ಶಕ್ತಿಯನ್ನು ಉತ್ತಮಪಡಿಸುತ್ತದೆ. ಹಲವಾರು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಇದನ್ನು ಸೇವಿಸಿದರೆ ಮೊಡವೆ ದೂರವಾಗುವುದು ಮಾತ್ರವಲ್ಲದೆ, ಬೊಕ್ಕೆ, ಶಿಲೀಂಧ್ರ ಸೋಂಕು ಇತ್ಯಾದಿಗಳಿಂದಲೂ ರಕ್ಷಣೆ ಒದಗಿಸುತ್ತದೆ.
ಯಕೃತ್ ಗೆ ಆಗುವ ಹಾನಿ ತಪ್ಪಿಸುವುದು ಮತ್ತು ಯಕೃತ್ ನ್ನು ಸರಿಪಡಿಸುವ ಕೆಲಸವನ್ನೂ ಹಾಗಲಕಾಯಿ ಮಾಡುತ್ತದೆ. ಇದು ಯಕೃತ್ ಗೆ ಪೋಷಣೆ ನೀಡುತ್ತದೆ. ತರಕಾರಿ ಮನೆಗೆ ತರುವಾಗ ಹಾಗಲಕಾಯಿಯನ್ನು ಸೇರಿಸಿಕೊಳ್ಳಲು ಮರೆಯದಿರಿ.