ಇಸ್ರೇಲ್‌ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಬೀದಿಗಿಳಿದ ನೂರಾರು ಇಸ್ರೇಲಿಗರು

Prasthutha|

ಟೆಲ್ ಅವೀವ್ : ಇಸ್ರೇಲ್ ಸರ್ಕಾರದ ವಿರುದ್ಧ ಇಸ್ರೇಲಿ ಜನರು ಬೀದಿಗಿಳಿದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಜನರು ಭಿತ್ತಿಪತ್ರಗಳು, ಬ್ಯಾನರ್‌ಗಳೊಂದಿಗೆ ಪ್ರತಿಭಟನೆ ಮಾಡುತ್ತಿದ್ದಾರೆ.
ಪ್ರಧಾನಿ ನೆತನ್ಯಾಹು ಇಸ್ರೇಲಿ ನಾಗರಿಕರನ್ನು ರಕ್ಷಿಸುವುದಕ್ಕಿಂತ ತಮ್ಮ ರಾಜಕೀಯ ಉಳಿವಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

- Advertisement -


ಪ್ರತಿಭಟನಕಾರರಲ್ಲಿ ಒಬ್ಬರಾದ ಮೋನಿಕಾ ಲೆವಿ ಈ ಬಗ್ಗೆ ಮಾತನಾಡುತ್ತಾ, ಬೆಂಜಮಿನ್ ನೆತನ್ಯಾಹು ದೇಶದ ನಿವಾಸಿಗಳ ಜೀವನದಲ್ಲಿ ಯಾವುದೇ ಕಾಳಜಿ ಹೊಂದಿಲ್ಲ. ಬದಲಿಗೆ ಕ್ಷುಲ್ಲಕ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.


ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಲಿಷ್ಟಕರ ಸ್ಥಿತಿಯನ್ನು ನಿಭಾಯಿಸುತ್ತಿವ ರೀತಿಯ ವಿರುದ್ಧ ಜನರು ಪ್ರತಿಭಟಿಸುತ್ತಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಟೆಲ್ ಅವೀವ್‌ನಲ್ಲಿ ರಕ್ಷಣಾ ಸಚಿವಾಲಯದ ಹೊರಗೆ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.



Join Whatsapp