ಬೆಂಗರೆ | SDPI ಪಕ್ಷದ ಕಛೇರಿ ‌ಉಧ್ಘಾಟನೆ

Prasthutha|

ಮಂಗಳೂರು : ಸೋಷಿಯಲ್ ‌ಡೆಮೋಕ್ರೆಟಿಕ್  ಪಾರ್ಟಿ ಆಫ್ ಇಂಡಿಯಾ ಇದರ 60 ಮತ್ತು11ನೇ ವಾರ್ಡ್ ಕಛೇರಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ SDPI ಕಾರ್ಪೋರೇಟರ್ ಮುನೀಬ್ ಬೆಂಗರೆ ಇಂದು ಉದ್ಘಾಟನೆ ಮಾಡಿದರು..

- Advertisement -

ಈ‌ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹನ್ನೊಂದು ವರ್ಷದಲ್ಲಿ SDPI ಪಕ್ಷವು‌ ನಿರಂತರ ವಾಗಿ‌ ಹಲವಾರು‌ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಇಂದು ಮತದಾರರು  ಚುನಾವಣೆಯಲ್ಲಿ ಆರಿಸಿ‌ ಕಳುಹಿಸಿದ್ದಾರೆ. ಬೆಂಗರೆ ಯಲ್ಲಿ‌ ಎಲ್ಲಾ ರಾಷ್ಟ್ರೀಯ ರಾಜಕೀಯ ಪಕ್ಷಗಳು ಇದೆ ಆದರೆ ಕೇವಲ ಚುನಾವಣೆ ಬರುವಾಗ ಮಾತ್ರ ಪಕ್ಷದ ಕಛೇರಿ ಕಾಣಲು ಸಾಧ್ಯವಿದೆ ಇತರ ಪಕ್ಷಕ್ಕೆ ವಿಭಿನ್ನವಾಗಿ ಎಸ್.ಡಿ.ಪಿ.ಐ ಪಕ್ಷ ಬೆಂಗರೆ ಯಲ್ಲಿ ಕಾರ್ಯಚರಿಸುತ್ತಿದೆ ಎಂದು ಅವರು ಹೇಳಿದರು.

 ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ವನ್ನು ಮಾಡಿದ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರ್ ಎಸ್.ಡಿ.ಪಿ.ಐ ಪಕ್ಷ ಹೋರಾಟದ ರಾಜಕೀಯ ದ ಮೂಲಕ ಇವತ್ತು ಜನರ ಮನಸ್ಸನ್ನು ಗೆಲ್ಲುವುದರೊಂದಿಗೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಮೂಡಿಬಂದಿದೆ. ಅದರ ಭಾಗವಾಗಿ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ನಮಗೆ ಫಲಿತಾಂಶಗಳು ಲಭಿಸಿದೆ ಎಂದರು.

- Advertisement -

  ಕಾರ್ಯಕ್ರಮ ದಲ್ಲಿ ಇನ್ನೋರ್ವ ಅಥಿತಿಯಾಗಿ ಆಗಮಿಸಿದ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ  ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ನಮ್ಮ ಬೆಂಗರೆ ಯ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿ ಇದ್ದೇನೆ ಇಲ್ಲಿ ಪಕ್ಷವು ಸಂಘಟಿತವಾಗಿ ಬೆಳೆಯುತ್ತಾ ಇದೆ ಇದರ ಮುಂದುವರಿದ ಭಾಗವಾಗಿ‌ ಇವತ್ತು ದೊಡ್ಡ ಗಾತ್ರದ ಕಛೇರಿ ಉದ್ಘಾಟನೆ ಯನ್ನು ಮಾಡಲು ಸಾಧ್ಯವಾಗಿದೆ ಎಂದರು ಹಾಗೂ ಪ್ರಸಕ್ತ ರಾಜಕೀಯ  ವಿದ್ಯಮಾನಗಳು ದೇಶದಲ್ಲಿ ಇಂದು SDPI ಅನಿವಾರ್ಯತೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI  ವಾರ್ಡ್ ಸಮಿತಿ ಅದ್ಯಕ್ಷರಾದ ವದೂದ್ ಬೆಂಗರೆ ವಹಿಸಿದ್ದರು ಅತಿಥಿ ಗಳಾಗಿ ‌ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸುಹೈಲ್ ಖಾನ್, ಉಪಾಧ್ಯಕ್ಷ ರಾದ ಸಿದ್ದೀಕ್ ಬೆಂಗರೆ, ಪಿ.ಎಫ್.ಐ ಬೆಂಗರೆ ವಲಯ ಕಾರ್ಯದರ್ಶಿ ಬಿಲಾಲ್, ವಾರ್ಡ್ ಉಪಾಧ್ಯಕ್ಷರಾದ ಅಶ್ರಫ್ ಎ.ಸಿ.ಎಚ್,11ನೇ ವಾರ್ಡ್ ಕಾರ್ಯದರ್ಶಿ ಅಝ್ಗರ್ ಉಪಸ್ಥಿತರಿದ್ದರು. ರಫೀಕ್ ಕಾರ್ಯಕ್ರಮವನ್ನು ನಿರೂಪಿಸಿ ವದೂದ್ ಬೆಂಗರೆ ಧನ್ಯವಾದಗೈದರು.

Join Whatsapp