ಯುವಕನ ಮೊಬೈಲ್​ನಲ್ಲಿ 13 ಸಾವಿರ ನಗ್ನ ಫೋಟೋಸ್: ಪ್ರಕರಣ ದಾಖಲು

Prasthutha|

ಬೆಂಗಳೂರು: 25 ವರ್ಷದ ಯುವಕನೋರ್ವ ತನ್ನ ಪ್ರೇಯಸಿ, ಆಕೆಯ ಸ್ನೇಹಿತೆಯರು, ಸಹೋದ್ಯೋಗಿಗಳು ಮತ್ತು ಇತರ ಮಹಿಳೆಯರು 13000 ನಗ್ನ ಫೋಟೋಸ್ ಮೊಬೈಲ್‌ನಲ್ಲಿ ಶೇಖರಿಸಿಟ್ಟಿರುವ ಪ್ರಕರಣ ನಡೆದಿದೆ.

- Advertisement -

22 ವರ್ಷದ ಯುವತಿ ಬಿಪಿಓ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ಸಹೋದ್ಯೋಗಿ ಆದಿತ್ಯ ಸಂತೋಷ್ (25)ನನ್ನು ನಾಲ್ಕು ತಿಂಗಳಿನಿಂದ ಪ್ರೀತಿಸುತ್ತಿದ್ದಳು. ಆದರೆ ಆದಿತ್ಯ ಸಂತೋಷ್ ಯುವತಿ ಜೊತೆಗೆ ಏಕಾಂತದಲ್ಲಿದ್ದಾಗಿನ ಫೋಟೋಗಳನ್ನು ಕ್ಲಿಕ್ ಮಾಡಿ ಶೇಖರಿಸಿಟ್ಟುಕೊಂಡಿದ್ದನು. ಇತರ ಮಹಿಳೆಯರ ಫೋಟೋಸ್ ಕೂಡ ಹೇಗೂ ಕ್ಲಿಕ್ ಮಾಡುತ್ತಿದ್ದನು.

ಒಮ್ಮೆ ಯುವತಿ ಅದಿತ್ಯನ ಮೊಬೈಲ್ ಪರಿಶೀಲಿಸಿದ್ದಾಳೆ. ಆಗ ಆದಿತ್ಯನ ಮೊಬೈಲ್ ನಲ್ಲಿ ತನ್ನ ಹಾಗೂ ಮಹಿಳಾ ಸಹೋದ್ಯೋಗಿಗಳ ಸಾವಿರಾರು ನಗ್ನ ಫೋಟೋಸ್ ಕಂಡು ದಿಗ್ಭ್ರಮೆಗೊಳಗಾಗಿದ್ದಾಳೆ.‌ ಬಳಿಕ ಫೋಟೋಗಳನ್ನು ಡಿಲೀಟ್ ಮಾಡುವಂತೆ ಯುವತಿ ಹೇಳಿದ್ರೂ ಆದಿತ್ಯ ಕೇಳಿಲ್ಲ. ಕೊನೆಗೆ ನವೆಂಬರ್ 20ರಂದು ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾಳೆ. ವಿಷಯ ತಿಳಿದ ಬಿಪಿಓ ಸಂಸ್ಥೆಯ ಕಾನೂನು ವಿಭಾಗದ ಮುಖ್ಯಸ್ಥರು ನವೆಂಬರ್ 25ರಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.

- Advertisement -

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp