ದರ್ಶನ್​ಗೆ ಬಿಗ್ ಶಾಕ್ ಕೊಟ್ಟ ಕೋರ್ಟ್​: ದಾಸನಿಗೆ ಜೈಲೂಟವೇ ಗತಿ

Prasthutha|

ಬೆಂಗಳೂರು: ನಟ ದರ್ಶನ್​ ಅವರಿಗೆ ಜೈಲಿನ ಊಟವೇ ಗತಿ ಆಗಿದೆ.

- Advertisement -

ಮನೆ ಊಟ, ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್​ ಸಲ್ಲಿಸಿದ್ದ ಅರ್ಜಿಯನ್ನು 24ನೇ ಎಸಿಎಂಎಂ ಕೋರ್ಟ್ ವಜಾ ಮಾಡಿ ಇಂದು (ಜು.25) ಆದೇಶ ನೀಡಿದೆ.

ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ ಎಂದು ಕಾರಣ ನೀಡಿ ದರ್ಶನ್ ಅವರು ಮನೆಯ ಊಟ ತರಿಸಲು ಅನುಮತಿ ಕೇಳಿದ್ದರು. ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು.



Join Whatsapp