ಹೊನ್ನಾವರ: ಅಮಾಯಕ ಆಟೋ ಚಾಲಕನ ಮೇಲೆ ಲಾರಿ ಹರಿಸಿ ಬರ್ಬರ ಹತ್ಯೆ

Prasthutha|

ಹೊನ್ನಾವರ: ಹಣಕಾಸಿನ ವಿಚಾರವಾಗಿ ಮೂವರ ನಡುವೆ ಜಗಳ‌ ನಡೆದಿದ್ದು, ಸಂಬಂಧವೇ ಇಲ್ಲದ ಆಟೋ ಚಾಲಕನನ್ನು ಲಾರಿ ಹರಿಸಿ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಓಲ್ವಿನ್ ರವಿ ಲೋಬೋ (31) ಕೊಲೆಯಾದ ಆಟೋ ಚಾಲಕ. ವಿನಾಯಕ ನಾರಾಯಣ ಭಟ್ಟ (40) ಕೊಲೆ ಮಾಡಿರುವ ದುಷ್ಕರ್ಮಿ ತಪ್ಪಿಸಿಕೊಂಡಿದ್ದಾನೆ.

- Advertisement -

ವಿನಾಯಕ ನಾರಾಯಣ ಭಟ್ಟನಿಗೆ ಹೊಸಾಕುಳಿಯ ವಸಂತ ಈಶ್ವರ್ ನಾಯ್ಕ್ ಹಾಗೂ ಸಾಲ್ಕೊಡದ ಜನಾರ್ಧನ ಕೇಶವ ನಾಯ್ಕ್ ಜೊತೆ ಹಣಕಾಸಿನ ವಿಚಾರವಾಗಿ ಜಗಳ ಇತ್ತು. ವಿನಾಯಕ ನಾರಾಯಣ ಭಟ್ಟ ಇಬ್ಬರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ.

ಇಂದು ಜನತಾ ಕಾಲೋನಿ ಬಳಿ ವಸಂತ ನಾಯ್ಕ್, ಜನಾರ್ಧನ ನಾಯ್ಕ್ ಜೊತೆ ಜಗಳಕ್ಕೆ ಸಂಬಂಧವೇ ಇಲ್ಲದ ಆಟೋ ಚಾಲಕ ಓಲ್ವಿನ್ ರವಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಟಿಪ್ಪರ್ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ವಿನಾಯಕ ನಾರಾಯಣ ಭಟ್ಟ ಮೂವರ ಮೇಲೆ ಲಾರಿ ಹರಿಸಿದ್ದಾನೆ. ತಲೆಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡ ಓಲ್ವಿನ್ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp