ಆಸ್ಟ್ರೇಲಿಯನ್ ಓಪನ್; ಮಿಕ್ಸೆಡ್ ಡಬಲ್ಸ್’ನಲ್ಲೂ ಸಾನಿಯಾ ಮಿರ್ಜಾ ಜೋಡಿಗೆ ಸೋಲು

Prasthutha|

ಮೆಲ್ಬೋರ್ನ್; ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ರಾಜೀವ್ ರಾಮ್ ಜೋಡಿಯ ಹೋರಾಟ ಕ್ವಾರ್ಟರ್ ಫೈನಲ್ ನಲ್ಲಿ ಅಂತ್ಯವಾಗಿದೆ.

- Advertisement -

ಅತಿಥೇಯ ಆಸ್ಟ್ರೇಲಿಯಾದ ಜೇಸನ್ ಕುಬ್ಲೇರ್ ಹಾಗೂ ಜೈಮಿ ಫೋರಿಸ್ ವಿರುದ್ಧದ ಪಂದ್ಯದಲ್ಲಿ 4-6, 6 -7 [7] ಅಂತರದಲ್ಲಿ ಇಂಡೋ-ಅಮೆರಿಕನ್ ಜೋಡಿ ನೇರ ಸೆಟ್‌ಗಳಲ್ಲಿ ಶರಣಾಯಿತು. ಈ ಮ‌ೂಲಕ ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ವರ್ಷಾರಾಂಭದ ಮೊದಲ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಭಾರತದ ಮಿರ್ಜಾ ಹೋರಾಟ ಅಂತ್ಯ ಕಂಡಂತಾಗಿದೆ.
ಇದಕ್ಕೂ ಮೊದಲು ನಡೆದ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿಯೇ ಸಾನಿಯಾ ಮಿರ್ಜಾ- ಉಕ್ರೇನ್‌ನ ಜತೆಗಾರ್ತಿ ನಾಡಿಯಾ ಕಿಚೆನೋಕ್ ಜೋಡಿ 4-6,6-7 (5) ನೇರ ಸೆಟ್ ಗಳಿಂದ ಸ್ಲೋವೆನಿಯಾದ ಟ್ಯಾಮರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ಜೋಡಿ ವಿರುದ್ಧ ಸೋಲನುಭವಿಸಿತ್ತು.
ಆ ಪಂದ್ಯದಲ್ಲಿ ಸೋಲಿನ ಬಳಿಕ ಸಾನಿಯಾ ಮಿರ್ಜಾ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು.
2022ರ ಆವೃತ್ತಿ ನನ್ನ ಕೊನೆಯ ಸೀಸನ್​ ಆಗಲಿದೆ. ನನಗೆ ಇನ್ಮುಂದೆ ಆಡುವುದು ಸರಳವಾಗಿಲ್ಲ. ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ.

ಈ ಸೀಸನ್ ಬಳಿಕ ಟೆನಿಸ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವುದಾಗಿ ಸಾನಿಯಾ ಮಿರ್ಜಾ ಹೇಳಿದ್ದರು



Join Whatsapp