ಕೊಡಗಿನಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ವೀರ ಯೋಧರ ಮ್ಯೂಸಿಯಂ

Prasthutha|

ಮಡಿಕೇರಿ: ವೀರ ಯೋಧರ ತವರು ಎಂದೇ ಖ್ಯಾತಿ ಗಳಿಸಿರುವ ಕೊಡಗಿಗೆ ಜನರಲ್ ತಿಮ್ಮಯ್ಯ ಮೂಸಿಯಂ ರೀತಿಯಲ್ಲೇ ಮತ್ತೊಂದು ವೀರ ಯೋಧ ಮ್ಯೂಸಿಯಂ ನಿರ್ಮಾಣ ಮಾಡಲು ಕೊಡಗಿನ ಮಾಜಿ ಸೈನಿಕರು ನಿರ್ಧಾರಿಸಿದ್ದಾರೆ.

- Advertisement -

ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ 2೦ ವೀರ ಯೋಧರ ಸ್ಮರಣಾರ್ತ ವಾರ್ ಮ್ಯೂಸಿಯಂ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಈಗಾಗೇಲೆ ವಾರ್ ಮ್ಯೂಸಿಯಂ ನಿರ್ಮಾಣಕ್ಕೆ ಕಾವೇರಿ ಕಾಲೇಜಿನ 1.8 ಎಕರೆ ಭೂಮಿಯನ್ನು ನೀಡಲಾಗಿದ್ದು, ಹಿರಿಯ ಸೇನಾಧಿಕಾರಿಗಳು ಮ್ಯೂಸಿಯಂ ನಿರ್ಮಾಣದ ಕಾರ್ಯ ನೋಡಿಕೊಳ್ಳಲಿದ್ದಾರೆ. ಈ ಮ್ಯೂಸಿಯಂ 20 ವೀರ ಯೋಧರ ಮಾಹಿತಿ ಸಾರುವ ಒಂದೊಂದು ಕೊಠಡಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

- Advertisement -

ಒಂದೊಂದು ಕೊಠಡಿಯನ್ನು ಆಯಾ ವೀರ ಸೇನಾನಿಗಳ ರೆಜಿಮೆಂಟ್ಗೆ ನೀಡಲಾಗುತ್ತದೆ. ಆಯಾ ರೆಜಿಮೆಂಟ್ನ ಅಧಿಕಾರಿಗಳು ಬಂದು ಸೇನಾ ಪದಕ ವಿಜೇತರ ಮಾಹಿತಿ, ಛಾಯಚಿತ್ರ ಹಾಗೂ ಸೇನಾ ಉಪಕರಣಗಳನ್ನು ಮ್ಯೂಸಿಯಂ ನಲ್ಲಿ ಇಡಲಿದ್ದಾರೆ. ಆದರಿಂದ ಈ ಮ್ಯೂಸಿಯಂ ಅತೀ ದೊಡ್ಡ ಮ್ಯೂಸಿಯಂ ಆಗಿ ರೂಪುಗೊಳ್ಳಲಿದೆ. 2024ರ ವರೆಗೆ ಈ ಮ್ಯೂಸಿಯಂ ಅನ್ನು ಮೂರ್ಣಗೊಳ್ಳುವ ಸಾಧ್ಯತೆ ಇದೆ.

Join Whatsapp