ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ತುಂಬೆ ನೇಮಕ

Prasthutha|

ಮಂಗಳೂರು: ಮಂಗಳೂರು ದಕ್ಷಿಣ‌ ಕ್ಷೇತ್ರ ಜನತಾದಳ‌ದ ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ತುಂಬೆ ‌ಅವರನ್ನು ನೇಮಿಸಲಾಗಿದೆ.

- Advertisement -

ಇತ್ತೀಚೆಗೆ‌ ಸುಮಾ‌ ಸದನದಲ್ಲಿ ನಡೆದ ಪಕ್ಷದ‌ ಕಾರ್ಯಕರ್ತರ ಸಭೆಯಲ್ಲಿ ದ.ಕ.‌ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವಗೌಡರ  ಸಮ್ಮುಖದಲ್ಲಿ ನೇಮಕ‌ ಮಾಡಲಾಗಿದೆ.

  ಅಲ್ತಾಫ್ ತುಂಬೆ ಮೂಲತ ತುಂಬೆ ಗ್ರಾಮದವರಾಗಿದ್ದು, ಪ್ರಸ್ತುತ ಮಂಗಳೂರು ದಕ್ಷಿಣ ಕ್ಷೇತ್ರ ಜನತಾದಳದ ಕಾರ್ಯಚಟುವಟಕೆ  ಹಾಗೂ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪಕ್ಷದ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಇವರ ಆಪ್ತ ಸಹಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಅವರು‌ ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರದ  ಪ್ರ‌ಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ‌ ಬಂಟ್ವಾಳ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp