ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ: ಎಎಪಿ ಆರೋಪ

Prasthutha|

ಚಂಡೀಗಡ: ಪ್ರವಾಹ ಪೀಡಿತ ದೆಹಲಿಗೆ ಉದ್ದೇಶಪೂರ್ವಕವಾಗಿ ಹತ್ನಿಕುಂಡ್ ಬ್ಯಾರೇಜ್ ಮೂಲಕ ನೀರನ್ನು ತಿರುಗಿಸಲು ಹರಿಯಾಣ ಸರ್ಕಾರವನ್ನು ಬಿಜೆಪಿ ಬಳಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

- Advertisement -


ಪಶ್ಚಿಮ ಯಮುನಾ ಕಾಲುವೆ ಮತ್ತು ಪೂರ್ವ ಯಮುನಾ ಕಾಲುವೆಗೆ ನೀರು ಬಿಡದೆ ಹತ್ನಿಕುಂಡ್ ಬ್ಯಾರೇಜ್ ನಿಂದ ಯಮುನಾ ನದಿಗೆ ನೀರು ಬಿಡಲಾಗುತ್ತಿದೆ. ಇದು ದೆಹಲಿಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ ಎಂದು ಎಎಪಿ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಹತ್ನಿಕುಂಡ್ ನಲ್ಲಿ ಹರಿಯುತ್ತಿರುವ ನೀರಿನ ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಹತ್ನಿಕುಂಡ್ ಬ್ಯಾರೇಜ್ ನಲ್ಲಿ, ನೀರಿನ ಹರಿವು ಮೂರು ವಿಭಿನ್ನ ಮಾರ್ಗಗಳಿವೆ. ಒಂದು ಮಾರ್ಗ ನೀರನ್ನು ದೆಹಲಿಗೆ ತರುತ್ತದೆ.

ಇನ್ನೊಂದು ಅದನ್ನು ಉತ್ತರ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. ಇಂತಹ ಪ್ರವಾಹದಲ್ಲಿ ಮೂರು ಕಾಲುವೆಗಳು ನೀರಿನ ಒತ್ತಡವನ್ನು ಸಮಾನವಾಗಿ ಹಂಚಿಕೆ ಮಾಡಿದ್ದರೆ ಇದು ಸೂಕ್ತವಾಗಿತ್ತು. ಆದರೆ ಬಿಜೆಪಿಯು ಯಮುನಾ ನದಿಯನ್ನು ರೂಪಿಸುವ ಮತ್ತು ದೆಹಲಿಯನ್ನು ಪ್ರವೇಶಿಸುವ ಹೊಳೆಗೆ ಎಲ್ಲಾ ನೀರನ್ನು ಕಳುಹಿಸಲು ಸಂಚು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

Join Whatsapp