ಪಾಟ್ನಾ: ಇಡಿ, ಸಿಬಿಐ ಕಚೇರಿಗಳನ್ನು ತನ್ನ ನಿವಾಸದಲ್ಲೇ ಸ್ಥಾಪಿಸಲು ಮುಂದಾಗಲಿ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಲೇವಡಿ ಮಾಡಿದ್ದಾರೆ.
ಈ ಕುರಿತು ತನ್ನ ತಾಯಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವೆ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿಯ ರಾಜಕೀಯ ವಿರೋಧಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿರುವುದರ ಆರೋಪಗಳನ್ನು ಉಲ್ಲೇಖಿಸಿ ಅವರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಉಪ ಮುಖ್ಯಮಂತ್ರಿಯಾಗಿದ್ದ ತನ್ನ ಮೊದಲ ಅವಧಿಯಲ್ಲಿ ಈ ಏಜೆನ್ಸಿಗಳಿಗೆ ತಾನು ಹೆದರಲಿಲ್ಲ ಎಂದು ಹೇಳಿದ ಅವರು, ಬಿಹಾರರ ಹಿತಾಸಕ್ತಿಗಳಿಗಾಗಿ ಕೇಂದ್ರ ವಿರುದ್ಧ ಹೋರಾಡುತ್ತೇನೆ ಎಂದು ತಿಳಿಸಿದರು.
ಆರ್. ಜೆ.ಡಿ. ಮುಖಂಡ ತೇಜಸ್ವಿ ಯಾದವ್ ಅವರು 2015 ರಿಂದ 2017 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.