ಶಿವಮೊಗ್ಗ: ಯುವತಿ ಮೇಲೆ ಅತ್ಯಾಚಾರ; ಆರೋಪಿ ಮುರಳೀಧರ್ ಭಟ್ ಪೊಲೀಸ್ ಬಲೆಗೆ

Prasthutha|

ತೀರ್ಥಹಳ್ಳಿ : ಟಿ.ವಿ.ನೋಡಲು ಬರುತ್ತಿದ್ದ ಪಕ್ಕದ ಮನೆಯ ಯುವತಿ ಮೇಲೆ  ಅತ್ಯಾಚಾರವೆಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ನಾಲೂರಿನಲ್ಲಿ ನಡೆದಿದೆ.

- Advertisement -

ಆರೋಪಿಯನ್ನು ಮುರಳೀಧರ್ ಭಟ್ ಎಂದು ಗುರುತಿಸಲಾಗಿದೆ. 2021 ರ ಡಿಸೆಂಬರ್ ನಲ್ಲಿ ಕಾಲೇಜು ಇಲ್ಲದ ಕಾರಣ ಟಿವಿ ನೋಡಲು ಹೋಗುತ್ತಿದ್ದ ವೇಳೆ ಪಕ್ಕದ ಮನೆಯ ಭಟ್ಟ ತನ್ನನ್ನು ಬೆದರಿಸಿ ಬಲತ್ಕರಿಸಿರುವುದಾಗಿ ಯುವತಿ ದೂರು ನೀಡಿದ್ದಾಳೆ.

ಯುವತಿಯ ದೇಹದಲ್ಲಿ ಬದಲಾವಣೆಯಾಗಿದ್ದನ್ನು ಗಮನಿಸಿದ ಆಕೆಯ ತಾಯಿ ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ತೋರಿಸಿದಾಗ ಯುವತಿ 7 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.

- Advertisement -

ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದ್ದು ಬಲಾತ್ಕಾರ ಪ್ರಕರಣದಲ್ಲಿ ದೂರು ದಾಖಲಿಸಿದ  ಆಗುಂಬೆ ಪೊಲೀಸರು   ಆರೋಪಿ ಭಟ್ಟನನ್ನು ಬಂಧಿಸಿದ್ದಾರೆ.



Join Whatsapp