ಸವಣೂರು: ಸವಣೂರು ಅಲ್ ಹಿದಾಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಕ್ರೀಡಾಕೂಟ ಸವಣೂರು ಅತ್ತಿಕೆರೆ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಹಿದಾಯ ಸ್ಪೋರ್ಟ್ಸ್ ಕ್ಲಬ್ ಸವಣೂರು ಅಧ್ಯಕ್ಷ ರಫೀಕ್ ಕೆನರಾ ವಹಿಸಿದ್ದರು. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗಣರಾಜ್ಯ ರಕ್ಷಿಸಿ ಅಭಿಯಾನದ ಪ್ರಯುಕ್ತ ಅಲ್ ಹಿದಾಯ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ ಸೌಹಾರ್ದ ಕ್ರೀಡಾಕೂಟವನ್ನು ಸವಣೂರು ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಷನ್ (ರಿ) ಚಾಪಲ್ಲಾ ಅಧ್ಯಕ್ಷ ಝಕರಿಯ ಮಾಂತೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಕೆನರಾ, ಬಾಬು ಎನ್, ರಫೀಕ್ ಎಂ.ಎ, ಮಾಜಿ ಸದಸ್ಯರಾದ ಕೃಷ್ಣಪ್ಪ ಸುಣ್ಣಜೆ ಹಾಗೂ ಇರ್ಷಾದ್ ಸರ್ವೆ, ಎಂ.ಎಸ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಣರಾಜ್ಯ ರಕ್ಷಿಸಿ ಅಭಿಯಾನದ ಪುತ್ತೂರು ಸಹ ಸಂಚಾಲಕ ಸಾಧಿಕ್ ಹಾಜಿ ಕೂರ್ನಡ್ಕ ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಸಂದೇಶ ಭಾಷಣ ಮಾಡಿದರು.
ಕ್ರೀಡಾಕೂಟದಲ್ಲಿ ವಿಜಯಿಯಾದ ತಂಡಗಳಿಗೆ ಬಹುಮಾನ ವಿತರಣೆಯನ್ನು ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ನೆರವೇರಿಸಿದರು
ಈ ಸಂದರ್ಭದಲ್ಲಿ ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷಇಕ್ಬಾಲ್ ಬೆಳ್ಳಾರೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲಾರ್ಪೆ, ಬದ್ರಿಯಾ ಜುಮಾ ಮಸೀದಿ ಚಾಪಲ್ಲ ಅಧ್ಯಕ್ಷ ಉಮರ್ ಹಾಜಿ ಕೆನರಾ , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಿಟಿ ಡಿವಿಜನ್ ಅಧ್ಯಕ್ಷ ಉಮ್ಮರ್ ಕೂರ್ನಡ್ಕ, ಎಸ್ ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಸಿದ್ದಿಕ್ ಇಡಿಕಿ , ಅಶ್ರಫ್ ಉರ್ಸಾಗ್, ರಫೀಕ್ ಸೋಂಪಾಡಿ, ಉಮ್ಮರ್ ಕಾಣಿಮಜುಳು, ಸಂಶುದ್ದೀನ್ ಮಾಂತೂರು, ಉಬೈದ್ ದುಬೈ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣರಾಜ್ಯ ರಕ್ಷಿಸಿ ಅಭಿಯಾನದ ಸಂಚಾಲಕರಾದ ಸಿದ್ದಿಕ್ ಅಲೆಕ್ಕಾಡಿ ಸ್ವಾಗತಿಸಿದರೆ, ಬಾತಿಷ ಬಡಕೋಡಿ ವಂದಿಸಿದರು.