ಕಿತ್ತು ಬರುತ್ತಿದೆ ಬಿಬಿಎಂಪಿ 23 ಕೋಟಿ ರೂ. ಖರ್ಚು ಮಾಡಿ ಹಾಕಿರುವ ರಸ್ತೆ

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಈ ಬಾರಿ ರಾಜ್ಯಕ್ಕೆ ಆಗಮಿಸಿದ್ದರಿಂದ, ಅದಕ್ಕೂ ಮೊದಲೆ ಮೋದಿ ಬರುತ್ತಾರೆಂದು ಬಿಬಿಎಂಪಿ ಕೋಟಿ ಕೋಟಿ ಹಣ ಖರ್ಚು ಮಾಡಿ ರಸ್ತೆಗಳನ್ನ ಅಭಿವೃದ್ಧಿ ಪಡಿಸಿತ್ತು. ಆದರೆ ಅಭಿವೃದ್ಧಿ ಮಾಡಿ ಒಂದು ವಾರ ಕಳೆಯುವ ಮೊದಲೇ ರಸ್ತೆ ಕಿತ್ತು ಹೋಗುತ್ತಿದ್ದು, ಬಿಬಿಎಂಪಿಯ ಕಳಪೆ ಕಾಮಗಾರಿಯ ಅಸಲಿಯತ್ತು ಬಯಲಾಗಿದೆ.

- Advertisement -

ಮೋದಿ ಸಂಚರಿಸಲು ನಗರದಲ್ಲಿ 14 ಕಿ.ಮೀ. ರಸ್ತೆ ಡಾಂಬರೀಕರಣ, ಫುಟ್ ಪಾತ್ ಸ್ಲ್ಯಾಬ್, ಬೀದಿ ದೀಪ, ಮರಗಳ ರೆಂಬೆ ಕಟ್, ಚರಂಡಿ ಸ್ವಚ್ಛತೆಗೆ ಸುಮಾರು 23 ಕೋಟಿ ರೂ. ಖರ್ಚಾಗಿದೆ ಎಂದು ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾಹಿತಿ ನೀಡಿದ್ದರು

ಮಳೆಯಿಂದ ರಸ್ತೆ ಕಿತ್ತು ಹೋಗಿತ್ತು. ಹೀಗಾಗಿ ಬಿಬಿಎಂಪಿ ನಿನ್ನೆ ಬೆಳಗ್ಗೆ ಮತ್ತೆ ಡಾಂಬರೀಕರಣ ಮಾಡಿತ್ತು. ನಿನ್ನೆ ಮಾಡಿದ್ದ ಡಾಂಬರೀಕರಣ ಕೂಡ ಇದೀಗ ಚಾಕೋಲೆಟ್ ನಂತೆ ಕಿತ್ತು ಬರುತ್ತಿದೆ. ಜ್ಞಾನಭಾರತಿ ರಸ್ತೆಯಲ್ಲಿ ಹಾಕಿರುವ ಡಾಂಬರು ಎದ್ದು ಬರ್ತಿರೋ ರೀತಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

Join Whatsapp