ಚಲಿಸುವ ಕಾರಿನಿಂದ ಬಾಲಕಿಯ ಶವ ಎಸೆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

Prasthutha|

ಕೊಯಮತ್ತೂರು: ಚಲಿಸುತ್ತಿರುವ ಕಾರಿನಿಂದ ಬಾಲಕಿ ಶವವನ್ನು ರಸ್ತೆಗೆ ಎಸೆಯುವ ಭಯಾನಕ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮವಾರ ಬೆಳಗ್ಗೆ 5 ಗಂಟೆಗೆ ಕೊಯಮತ್ತೂರಿನ ಅವಿನಾಶಿ ರಸ್ತೆಯ ಬಳಿಯಿರುವ ಚಿನ್ನಯಂ ಪಾಲಯದಲ್ಲಿ ಈ ಘಟನೆ ನಡೆದಿದ್ದು ,ಇಂದು ಬೆಳಕಿಗೆ ಬಂದಿದೆ.

- Advertisement -

ಕಾರು ಚಲಿಸುತ್ತಿರುವಾಗಲೇ ಬಾಲಕಿಯ ಶವವನ್ನು ಕಾರಿನಿಂದ ಹೊರಕ್ಕೆ ಎಸೆಯಲಾಗಿದೆ. ಬಾಲಕಿಯ ದೇಹದ ಮೇಲೆ ಗಂಭೀರ ಗಾಯಗಳಾಗಿವೆ. ಮೃತ ಬಾಲಕಿ ಯಾರು ಎಂಬುದು ಇನ್ನೂ ತಿಳಿದಿಲ್ಲ. ಮೃತದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp