ಬಯೋಮೆಟ್ರಿಕ್ ಸೇರ್ಪಡೆ ಮಾಡುವ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹಿಸಿ ಮಡಿಕೇರಿ SDPI ಯಿಂದ ಜಿಲ್ಲಾಧಿಕಾರಿಗೆ ಮನವಿ

Prasthutha|

ಮಡಿಕೇರಿ,ಸೆ 07:- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ನಾಗರಿಕರ ಬಯೋಮೆಟ್ರಿಕ್ ಸೇರ್ಪಡೆ ಮಾಡುವ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಡಿಕೇರಿ ನಗರ ಸಮಿತಿ ವತಿಯಿಂದ ಕೊಡಗು ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

- Advertisement -

ಮನವಿಯಲ್ಲಿ ಈಗಾಗಲೇ ನಿಗದಿಪಡಿಸಿದ ದಿನಾಂಕವು ಕೊನೆಗೊಳ್ಳಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದ್ದು,ಸರಿ ಸುಮಾರು 1000-1200 ಪಡಿತರ ಚೀಟಿಗಳಿವೆ,ಆದರೆ ಸರ್ವರ್ ಸಮಸ್ಯೆಯಿಂದ ದಿನಕ್ಕೆ 50 ರಿಂದ 60 ಮಂದಿಯ ಬಯೋಮೆಟ್ರಿಕ್ ಪಡೆಯಲು ಮಾತ್ರ ಸಾಧ್ಯ ವಾಗುತ್ತಿದ್ದು,ಅದಲ್ಲದೇ ಪ್ರಸ್ತುತ ಕೋವಿಡ್ ಪ್ರಕರಣಗಳು ಇರುವುದರಿಂದ ಹೆಚ್ಚು ಜನ ಒಮ್ಮಲೆ ಸೇರುವುದು ಕೂಡ ಅಪಾಯಕಾರಿ ಯಾಗಿರುವುದರಿಂದ ,ಜನರ ಹಿತದೃಷ್ಟಿಯಿಂದ ಬಯೋಮೆಟ್ರಿಕ್ ಸೇರ್ಪಡೆ ಮಾಡುವ ಕೊನೆ ದಿನಾಂಕ ವನ್ನು ಕನಿಷ್ಠ ಒಂದು ತಿಂಗಳಾದರು ವಿಸ್ತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ SDPI ಮಡಿಕೇರಿ ನಗರಾಧ್ಯಕ್ಷ ಖಲೀಲ್ ,ಉಪಾಧ್ಯಕ್ಷ ಮೈಕಾಲ್ ವೇಗಸ್,ಕಾರ್ಯದರ್ಶಿ ಜಂಶೀರ್ ,ಹಾಗೂ ತನುಜಾವತಿ ಉಪಸ್ಥಿತರಿದ್ದರು



Join Whatsapp