ಮೋದಿ ಆಳ್ವಿಕೆಯಲ್ಲಿ ಹೆಚ್ಚಾದ UAPA ಕರಾಳತೆ | ಐದು ವರ್ಷಗಳಲ್ಲಿ 5128 ಪ್ರಕರಣ, 7050 ಬಂಧನ !

Prasthutha|

ನರೇಂದ್ರ ಮೋದಿ ಆಡಳಿತದಲ್ಲಿ 2015ರಿಂದ 5 ವರ್ಷಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದ್ದು, 2015-2019ರ ಅವಧಿಯಲ್ಲಿ UAPA ಅಡಿಯಲ್ಲಿ 5,128 ಪ್ರಕರಣಗಳು ದಾಖಲಾಗಿದೆ. 7,050 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸಂಸತ್ತಿನಲ್ಲಿ ಹೇಳಿದ್ದಾರೆ.

- Advertisement -

ರಾಜ್ಯಸಭಾ ಸದಸ್ಯ ಅಬ್ದುಲ್ ವಹಾಬ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, 2019ರಲ್ಲಿ 1,226 ಪ್ರಕರಣಗಳಲ್ಲಿ 1,948 ಜನರು ಬಂಧಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

2019ರವರೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಂಪೂರ್ಣ ವರದಿ ಮಾಡಿದ್ದು, ಅದರಂತೆ 2015ರಿಂದ 2019ರವರೆಗೆ ಕ್ರಮವಾಗಿ 897, 922, 901, 1,182 1,226 ಪ್ರಕರಣಗಳು (ಒಟ್ಟು 5,128) ದಾಖಲಾಗಿವೆ. ಅದೇ ರೀತಿ 1,128, 999, 1,554, 1,421, 1,948 ಬಂಧನಗಳಾಗಿವೆ (ಒಟ್ಟು7,050).

- Advertisement -

2019ರಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಅದೇ ವರ್ಷ ಕೇಂದ್ರ ಸರ್ಕಾರದ ವಿವಾದಿತ ಸಿಎಎ-ಎನ್‌ಆರ್‌ಸಿ ಯನ್ನು ವಿರೋಧಿಸಿ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿತ್ತು. ಆ ವರ್ಷ ಮಣಿಪುರದಲ್ಲಿ 306, ತಮಿಳುನಾಡಿನಲ್ಲಿ 270, ಜಮ್ಮು ಮತ್ತು ಕಾಶ್ಮಿರದಲ್ಲಿ 255, ಜಾರ್ಖಂಡ್‌ನಲ್ಲಿ 105 ಮತ್ತು ಅಸ್ಸಾಂನಲ್ಲಿ 87 ಪ್ರಕರಣಗಳು ದಾಖಲಾಗಿವೆ.  5 ವರ್ಷಗಳ ಅವಧಿಯಲ್ಲಿ 229 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.



Join Whatsapp