ಪ್ರೀತಿಸಿ ಮದುವೆಯಾದ CRPF ಪೇದೆ ಯುವತಿಗೆ ಕೈಕೊಟ್ಟು ಎಸ್ಕೇಪ್ | ಪತಿ ಹುಡುಕಿಕೊಡುವಂತೆ ಠಾಣೆ ಮುಂದೆ ಪ್ರತಿಭಟನೆ

Prasthutha: March 11, 2021

ಹೊಸಕೋಟೆ : ಪ್ರೀತಿಸಿ ಮದುವೆಯಾದ CRPF ಪೇದೆ ಯುವತಿಗೆ ಕೈಕೊಟ್ಟು ಪರಾರಿಯಾದ ಘಟನೆ ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರ ಗ್ರಾಮದಲ್ಲಿ ನಡೆದಿದೆ. ಯುವತಿ ಮತ್ತು ಯುವಕ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಇಬ್ಬರೂ ಇತ್ತೀಚಿಗಷ್ಟೇ ಸಿ ಆರ್ ಪಿ ಎಫ್ ಕ್ಯಾಂಪ್ ನಲ್ಲೇ ಯುವತಿಗೆ ತಾಳಿ ಕಟ್ಟುವ ಮೂಲಕ ಮದುವೆಯಾಗಿದ್ದರು. ಆದರೆ ಇದೀಗ ಸಿ ಆರ್ ಪಿ ಎಫ್ ಪೇದೆ ದಿಢೀರ್ ನಾಪತ್ತೆಯಾಗಿ ಯುವತಿಗೆ ಕೈಕೊಟ್ಟಿರುವುದಾಗಿ ತಿಳಿದುಬಂದಿದೆ.

ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರದ ಯುವಕ ಪ್ರಮೋದ್ ಹಾಗೂ ಯುವತಿ ಅನುಜಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.  

ಸಿ ಆರ್ ಪಿ ಎಫ್ ನಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮೋದ್ ಸಿ ಆರ್ ಪಿ ಎಫ್ ಕ್ಯಾಂಪ್ ನಲ್ಲೇ ಅನುಜಾಳಿಗೆ ತಾಳಿ ಕಟ್ಟುವ ಮೂಲಕ ಮದುವೆಯಾಗಿದ್ದನು. ಆದರೆ ಈಗ ಪ್ರಮೋದ್ ಅನುಜಾಳನ್ನು ಬಿಟ್ಟು ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ.

ಇದರಿಂದಾಗಿ ಯುವತಿ ಅನುಜಾ ಹಾಗೂ ಅವರ ಪೋಷಕರು, ಕಳೆದ ರಾತ್ರಿ ನಂದಗುಡಿ ಪೊಲೀಸ್ ಠಾಣೆಯ ಎದುರು ಪತಿ ಸಿ ಆರ್ ಪಿ ಎಫ್ ಪೇದೆ ಪ್ರಮೋದ್ ನನ್ನು ಹುಡುಕಿ ಕೊಡುವಂತೆ ಧರಣಿ ನಡೆಸುತ್ತಿದ್ದಾರೆ. ಅಲ್ಲದೇ ಪತ್ನಿ ಅನುಜಾ ತನ್ನನ್ನು ಬಿಟ್ಟು ಪ್ರಮೋದ್ ಬೇರೊಬ್ಬ ಯುವತಿಯೊಂದಿಗೆ ವಿವಾಹ ಆಗೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿಯೂ ಆರೋಪಿಸಿದ್ದಾರೆ. ಹೀಗಾಗಿ ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಈ ಸಂಬಂಧ ನಂದಗುಡಿ ಠಾಣೆಯ ಪೊಲೀಸರು ಯುವತಿ ಅನುಜಾ ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿ, ಪ್ರಮೋದ್ ನನ್ನು  ಹುಡುಕಿ ಕೊಟ್ಟು ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಸಮಾಧಾನ ಪಡಿಸಿ ಮನೆಗೆ ಮರಳಿ ಕಳುಹಿಸಿರುವ ಘಟನೆ ನಡೆದಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!