ಪ್ರಥಮ WTO ಮುಖ್ಯಸ್ಥೆಯಾಗಿ ಆಫ್ರಿಕನ್ ಮಹಿಳೆ ಒಕೊಂಜೊ ಆಯ್ಕೆ

Prasthutha|

- Advertisement -

ಲಂಡನ್: ವಿಶ್ವ ವಾಣಿಜ್ಯ ಸಂಸ್ಥೆ (WTO) ಮೊದಲ ಬಾರಿಗೆ ಮಹಿಳಾ ಮುಖ್ಯಸ್ಥರನ್ನು ನೇಮಿಸಿದೆ. ಆಫ್ರಿಕನ್ ಮೂಲದ ನಗೋಸಿ ಒಕೊಂಜೊ ಐವೆಲಾ ಅವರನ್ನು ಡಬ್ಲ್ಯುಟಿಒನ ಹೊಸ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ. ಈ ಹುದ್ದೆಗೆ ಮಹಿಳೆಯನ್ನು ನೇಮಕ ಮಾಡುವುದು ಇದೇ ಮೊದಲು.

ನಾಗೋಸಿ ಎರಡು ಬಾರಿ ನೈಜೀರಿಯಾದ ಹಣಕಾಸು ಸಚಿವೆಯಾಗಿದ್ದರು. ದಕ್ಷಿಣ ಕೊರಿಯಾದ ರಾಯಭಾರಿ ಅಧಿಕಾರದಿಂದ ಕೆಳಗಿಳಿದ ನಂತರ ನಾಗೋಸಿ ಚುನಾಯಿತರಾಗಿದ್ದಾರೆ. ನಾಗೋಸಿಗೆ ಭಾರತದಿಂದಲೂ ಬೆಂಬಲ ದೊರಕಿತ್ತು. ಕಳೆದ ನವೆಂಬರ್‌ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಅಮೇರಿಕ WTO ಕ್ರಮಗಳನ್ನು ವಿರೋಧಿಸಿತ್ತು. ದಕ್ಷಿಣ ಕೊರಿಯಾದ ರಾಯಭಾರಿ ಯೋ ಮಿಂಗ್ ಹೀ ಅವರ ರಾಜೀನಾಮೆಯೊಂದಿಗೆ ನಾಗೋಸಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

- Advertisement -

ನಾಗೋಸಿ ವಿಶ್ವಬ್ಯಾಂಕ್ ಉಸ್ತುವಾರಿಯಾಗಿ ಮತ್ತು ನೈಜೀರಿಯಾದ ಹಣಕಾಸು ಸಚಿವರಾಗಿ 25 ವರ್ಷಗಳ ಅನುಭವ ಇರುವ ಮಹಿಳೆಯಾಗಿದ್ದಾರೆ. ಜಾಗತಿಕ ಆರ್ಥಿಕತೆಯನ್ನು ಮುಂದೆ ಸಾಗಿಸಲು ಹೊಸ ನೀತಿಗಳನ್ನು ರೂಪಿಸಲು ಮತ್ತು ಜಾರಿಗೆ ತರಲು ಕೆಲಸ ಮಾಡುತ್ತೇನೆ ಎಂದು ನಾಗೋಸಿ ಹೇಳಿದ್ದಾರೆ. ಸಾಮೂಹಿಕ ಕಾರ್ಯ ಚಟುವಟಿಕೆಗಳ ಮೂಲಕ WTO ಅನ್ನು ಬಲಪಡಿಸಬಹುದು ಎಂದು ಅವರು ಹೇಳಿದ್ದಾರೆ. ನೈಜೀರಿಯಾದ ಡೆಲ್ಟಾ ರಾಜ್ಯದ ಒಗ್ವಾಶಿ ಉಕ್ವುದಲ್ಲಿ ನಗೋಸಿಯ ಜನನ. ಅವರು 1976 ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಎಂಐಟಿಯಿಂದಲೂ ಪಿಎಚ್‌ಡಿ ಪದವಿ ಪಡೆದಿದ್ದಾರೆ.

Join Whatsapp