ರಕ್ಷಣಾ ಸಚಿವರ ಕಚೇರಿಯಲ್ಲೇ ಅತ್ಯಾಚಾರ | ಸಂತ್ರಸ್ತೆಯ ಕ್ಷಮೆಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿ

Prasthutha|

ಕ್ಯಾನ್ಬೆರಾ : ಆಸ್ಟ್ರೇಲಿಯಾದ ಸಂಸತ್ ಭವನದ ರಕ್ಷಣಾ ಸಚಿವರ ಕಚೇರಿಯೊಳಗೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯ್ಲಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸಂತ್ರಸ್ತ ಮಹಿಳೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

- Advertisement -

2019ರ ಮಾರ್ಚ್ ನಲ್ಲಿ ಸಭೆ ಇರುವುದಾಗಿ ಹೇಳಿ ನನ್ನನ್ನು ಕಚೇರಿಗೆ ಕರೆಸಲಾಯಿತು. ನಂತರ ಅಲ್ಲಿನ ಸಿಬ್ಬಂದಿಯೊಬ್ಬರು ನನ್ನನ್ನು ಅತ್ಯಾಚಾರ ಮಾಡಿದರು ಎಂದು ಮಹಿಳೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಅವರ ಸಿಬ್ಬಂದಿಯೇ ಅತ್ಯಾಚಾರ ಎಸಗಿರುವುದಾಗಿ ಆಕೆ ಆಪಾದಿಸಿದ್ದಾಳೆ. ನಾನು ಈಗಾಗಲೇ ಪೊಲೀಸರಲ್ಲಿ ಈ ವಿಚಾರ ಹಂಚಿಕೊಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಆದರೆ, ಅಧಿಕೃತ ದೂರು ನೀಡಿದ್ದಾರೆಯೇ ತಿಳಿದುಬಂದಿಲ್ಲ.

- Advertisement -

ಮಹಿಳೆಯ ಆರೋಪದಿಂದಾಗಿ ಸ್ಕಾಟ್ ಮಾರಿಸನ್ ಬೇಸರಗೊಂಡಿದ್ದಾರೆ. ಇಂತಹ ಕೃತ್ಯ ಎಂದಿಗೂ ನಡೆಯಬಾರದು. ಸಂತ್ರಸ್ತ ಮಹಿಳೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಆಕೆಯ ಮೇಲೆ ದುಷ್ಕೃತ್ಯ ಎಸಗಿದವರ ವಿರುದ್ಧ ಕ್ರಮಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.  

Join Whatsapp